Site icon Super News Daily

ವಿಶ್ವ ಗ್ರಾಹಕ ಹಕ್ಕುಗಳ ದಿನ 2024 ಇತಿಹಾಸ, ಉದ್ದೇಶ, ಥೀಮ್ ಸಂಪೂರ್ಣ ಮಾಹಿತಿ

ವಿಶ್ವ ಗ್ರಾಹಕ ಹಕ್ಕುಗಳ ದಿನ 2024 ಇತಿಹಾಸ, ಉದ್ದೇಶ, ಥೀಮ್ ಸಂಪೂರ್ಣ ಮಾಹಿತಿ

ವಿಶ್ವ ಗ್ರಾಹಕ ಹಕ್ಕುಗಳ ದಿನ 2024 ಇತಿಹಾಸ, ಉದ್ದೇಶ, ಥೀಮ್ ಸಂಪೂರ್ಣ ಮಾಹಿತಿ

ಪ್ರತಿ ವರ್ಷ ಮಾರ್ಚ್ 15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು (World Consumer Rights Day-ವರ್ಲ್ಡ್ ಕಂಜುಮರ್ ರೈಟ್ಸ್ ಡೇ) ಆಚರಿಸಲಾಗುತ್ತದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕರ ಹಕ್ಕುಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಪ್ರತಿವರ್ಷ ಒಂದೊಂದು ಪರಿಕಲ್ಪನೆಯೊಂದಿಗೆ ವಿಶಿಷ್ಟ ಥೀಮ್ ನೊಂದಿಗೆ ಜಾಗತಿಕವಾಗಿ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯ ಇತಿಹಾಸ:

ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ 1983 ರಲ್ಲಿ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಯಿತು. 1983 ರಿಂದ ಇಂದಿನವರೆಗೂ ಪ್ರತಿ ವರ್ಷ ಮಾರ್ಚ್ 15 ರಂದು ಜಾಗತಿಕವಾಗಿ ಆಚರಿಸಲಾಗುತ್ತಿದೆ. 1962ರ ಮಾರ್ಚ್ 15 ರಂದು ಅಂದಿನ ಅಮೇರಿಕಾ ಅಧ್ಯಕ್ಷರ ಕಾಂಗ್ರೆಸ್ ಗೆ ವಿಶೇಷ ಸಂದೇಶವನ್ನು ನೀಡಿದರು. ಗ್ರಾಹಕರ ಹಕ್ಕುಗಳ ಸಮಸ್ಯೆಯ ವಿಚಾರದ ಬಗ್ಗೆ ಚರ್ಚ ನಡೆಸಿದರು ಈ ಮೂಲಕ ಗ್ರಾಹಕರ ಹಕ್ಕುಗಳ ವಿಷಯದ ಪ್ರಾಮುಖ್ಯತೆಯನ್ನು ವಿಶ್ವದಲ್ಲಿ ಎತ್ತಿ ತೋರಿಸಿದ ಮೊಟ್ಟಮೊದಲ ವಿಶ್ವ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು.

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯ ಉದ್ದೇಶ:

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯ ಪ್ರಮುಖ ಉದ್ದೇಶ ಏನೆಂದರೆ ಗ್ರಾಹಕರ ಸುರಕ್ಷತೆ ಕಾಯಿದೆಯ ಪ್ರಕಾರ ಗ್ರಾಹಕರಾಗಿ ಯಾವುದೇ ಒಂದು ವಸ್ತುವನ್ನು ಖರೀದಿಸುವಾಗ ಆ ವಸ್ತುವಿನ ಗುಣಮಟ್ಟ ಸುರಕ್ಷತೆ ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿಯನ್ನು ಪರಿಶೀಲಿಸಬೇಕು ಎಂದು ಈ ದಿನದಂದು ವಿಶ್ವದ ಎಲ್ಲಾ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ಭಾರತದಲ್ಲೂ ಕೂಡ ಪ್ರತಿ ವರ್ಷ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ ಈ ದಿನದಂದು ದೇಶಾದ್ಯಂತ ವಿಚಾರ ಸಂಕಿರಣಗಳು ಚರ್ಚಾ ಗೋಷ್ಠಿಗಳು ಪ್ರಬಂಧ ಸ್ಪರ್ಧೆಗಳನ್ನು ಆಯೋಜನೆ ಮಾಡುವ ಮೂಲಕ ಜನರಲ್ಲಿ ಗ್ರಾಹಕ ಹಕ್ಕುಗಳ ಕುರಿತಾಗಿ ಜಾಗೃತಿಯನ್ನು ಮೂಡಿಸುವ ವಿಶಿಷ್ಟ ಕೆಲಸವನ್ನು ಮಾಡಲಾಗುತ್ತದೆ.

ವಿಶ್ವ ಗ್ರಾಹಕ ಹಕ್ಕುಗಳ ದಿನ 2024ರ ಥೀಮ್/ಧ್ಯೇಯ:

ವಿಶ್ವ ಗ್ರಾಹಕ ಹಕ್ಕುಗಳ ದಿನದ 2024ರ ಪರಿಕಲ್ಪನೆಯ ಪ್ರಮುಖ ವಿಷಯ- “Fair and Responsible AI for Consumers” ಅಂದರೆ ‘ ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಎಐ” ಎಂಬುದಾಗಿದೆ.

ಇದು ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಯುಗವಾಗಿದ್ದು ಇಲ್ಲಿ ಹಲವಾರು ಪ್ರಗತಿಗಳು ಡಿಜಿಟಲ್ ಜಗತ್ತನ್ನು ಬೆರಗುಗೊಳಿಸಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಹೊಸ ಪರಿಕಲ್ಪನೆಯು ಇಂದಿನ ಜಗತ್ತಿನಲ್ಲಿ ಹಲವಾರು ಪ್ರಮುಖ ಬೆಳವಣಿಗೆಗಳಿಗೆ ಕಾರಣವಾಗಿದೆ. ಇಂದು ಎಲ್ಲಾ ಹಂತಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಗ್ರಾಹಕರು ಅಳವಡಿಸಿಕೊಂಡಿದ್ದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉಪಕರಣಗಳನ್ನು ಮಹತ್ವದ ಎಲ್ಲಾ ಕೆಲಸಗಳಿಗೆ ಬಳಸಲಾಗುತ್ತದೆ ಈ ಹಿನ್ನೆಲೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಯು ಗ್ರಾಹಕರಿಗೆ ವ್ಯವಸ್ಥಿತವಾಗಿ ಲಭಿಸುವಂತೆ ಎಚ್ಚರ ವಹಿಸಬೇಕು ಎನ್ನುವುದು ಈ ವರ್ಷದ ವಿಶ್ವ ಗ್ರಾಹಕ ಹಕ್ಕುಗಳ ದಿನದ ಪ್ರಮುಖ ಧ್ಯೇಯವಾಗಿದೆ.

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ 2023ರ ಥೀಮ್ ಅಥವಾ ಧ್ಯೇಯ:

ವಿಶ್ವ ಗ್ರಾಹಕ ಹಕ್ಕುಗಳ ದಿನದ 2023 ರ ಧ್ಯೇಯ/ವಿಷಯವು: “ಶುದ್ಧ ಶಕ್ತಿ ಪರಿವರ್ತನೆಯ ಮೂಲಕ ಗ್ರಾಹಕರನ್ನು ಸಬಲೀಕರಣಗೊಳಿಸುವುದು”. ಗ್ರಾಹಕರ ಹಕ್ಕುಗಳು, ಗ್ರಾಹಕರ ರಕ್ಷಣೆ ಮತ್ತು ಸಬಲೀಕರಣದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು.

ವಿಶ್ವ ಗ್ರಾಹಕ ಹಕ್ಕುಗಳ ದಿನ 2024 ಇತಿಹಾಸ, ಉದ್ದೇಶ, ಥೀಮ್ ಸಂಪೂರ್ಣ ಮಾಹಿತಿ 01

ಭಾರತದಲ್ಲಿ ಗ್ರಾಹಕ ಹಕ್ಕುಗಳ ರಕ್ಷಣೆ:

ಒಟ್ಟಾರೆ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯನ್ನು ಪ್ರತಿ ವರ್ಷ ಮಾರ್ಚ್ 15 ರಂದು ಜಾಗತಿಕವಾಗಿ ಆಚರಿಸಲಾಗುತ್ತಿದ್ದು ಈ ಮೂಲಕ ಗ್ರಾಹಕರಲ್ಲಿ ಗ್ರಾಹಕರ ಕುರಿತಾದ ಹಾಗೂ ಗ್ರಾಹಕ ಕಾನೂನುಗಳ ಕುರಿತಾದ ಅರಿವು ಮೂಡಿಸುವ ಮಹತ್ವದ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತದೆ ಪ್ರಮುಖ ನಾಯಕ ಎಂದು ಅಮೆರಿಕಾದ ಮಾಜಿ ಅಧ್ಯಕ್ಷರಾದ ಜಾನ್ ಎಫ್ ಕೆನಡಿ ಅವರನ್ನು ಗುರುತಿಸಲಾಗಿದೆ.

ಇವುಗಳನ್ನೂ ಓದಿ:

Exit mobile version