ಮದುವೆ-ಫೋಟೋ-ಅಥವಾ-ವೀಡಿಯೋ-ಹಂಚಿಕೊಳ್ಳಲ್ಲ-ಎಂದು-ತಾಪ್ಸಿ-ಪನ್ನು-ಹೇಳಿದ್ದೇಕೇಮದುವೆ-ಫೋಟೋ-ಅಥವಾ-ವೀಡಿಯೋ-ಹಂಚಿಕೊಳ್ಳಲ್ಲ-ಎಂದು-ತಾಪ್ಸಿ-ಪನ್ನು-ಹೇಳಿದ್ದೇಕೇ

ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?

ಮದುವೆ-ಫೋಟೋ-ಅಥವಾ-ವೀಡಿಯೋ-ಹಂಚಿಕೊಳ್ಳಲ್ಲ-ಎಂದು-ತಾಪ್ಸಿ-ಪನ್ನು-ಹೇಳಿದ್ದೇಕೇ
ಮದುವೆ-ಫೋಟೋ-ಅಥವಾ-ವೀಡಿಯೋ-ಹಂಚಿಕೊಳ್ಳಲ್ಲ-ಎಂದು-ತಾಪ್ಸಿ-ಪನ್ನು-ಹೇಳಿದ್ದೇಕೇ

ತಾಪ್ಸಿ ಪನ್ನು: ಇತ್ತೀಚೆಗಷ್ಟೇ ಇಂಟರ್ನೆಟ್ ತುಂಬ ಸಖತ್ ಸುದ್ದಿಯಾಗಿದ್ದ ತಾಪ್ಸಿ ಪನ್ನು ಅವರ ಮದುವೆಯ ವಿಚಾರ ತಮೆಗಲ್ಲ ತಿಳಿದದ್ದೇ ಇದೆ. ಹೆಸರಾಂತ ಬಹುಭಾಷಾ ನಟಿ ತಾಪ್ಸಿ ಪನ್ನು ಅವರು ತಮ್ಮ ಬಹುಕಾಲದ ಸ್ನೇಹಿತ ಡೆನ್​ಮಾರ್ಕ್​ನ ಹೆಸರಾಂತ ಬ್ಯಾಡ್ಮಿಂಟನ್​ ಆಟಗಾರರಾದ ಮಥಿಯಾಸ್​ ಬೋ ಅವರೊಂದಿಗೆ ಕ್ರಿಶ್ಚಿಯನ್​ ಹಾಗೂ ಸಿಖ್​ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಕಡೆಗೂ ತಮ್ಮ ಮದುವೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಮೌನ ಮುರಿದಿದ್ದು, ತಾನೇನು ಗುಟ್ಟಾಗಿ ಮದುವೆಯಾಗಿಲ್ಲ. ಅದರ ಅನಿವಾರ್ತೆಯೂ ನನಗಿಲ್ಲ ಎಂದು ನೆಟ್ಟಿಗರ ಪ್ರಶ್ನೆಗಳಿಗೆ ಖಡಕ್ಕಾಗಿ ಉತ್ತರಿಸಿದ್ದಾರೆ.

ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?
ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?

ಕಳೆದ ಮಾರ್ಚ್ 22ರಂದು ಉದಯಪುರದಲ್ಲಿ ತಮ್ಮ ಬಹುಕಾಲದ ಗೆಳೆಯ ಮಥಿಯಾಸ್ ಬೋ ಅವರೊಂದಿಗೆ ಅದ್ಧೂರಿ ಮತ್ತು ನಿಕಟ ಸಮಾರಂಭದಲ್ಲಿ ತಾಪ್ಸಿ ವಿವಾಹವಾದರು. ನಟಿಯ ಮದುವೆಯ ವಿಚಾರವು ಪ್ರಸರಣಗೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಗೆ ಬಗೆಯ ಚರ್ಚೆಗಳು ನಡೆದವು. ಈ ಮದುವೆಯ ಕುರಿತು ನೆಟ್ಟಿಗರು, ತಾಪ್ಸಿ ಕದ್ದು-ಮುಚ್ಚಿ ಮದುವೆಯಾಗಿದ್ದಾರೆ. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾರಣವೇನು? ಇಲ್ಲಿಯವರೆಗೆ ತಮ್ಮ ಮದುವೆ ಬಗ್ಗೆ ಒಂದೇ ಒಂದು ಫೋಟೋ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಏಕೆ ಹಂಚಿಕೊಂಡಿಲ್ಲ ಎಂದು ಹತ್ತ ಹಲವಾರು ರೀತಿಗಳಲ್ಲಿ ಚರ್ಚಿಸುವುದರ ಜೊತೆಗೆ ಪ್ರಶ್ನೆಗಳನ್ನೂ ಮಾಡಿದ್ದುರು.

ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?
ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?

ಇಂತಹ ಹತ್ತು ಹಲವಾರು ಪ್ರಶ್ನೆಗಳು ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದ್ದರೂ ತಾಪ್ಸಿ ಪನ್ನು ಇದ್ಯಾವುದಕ್ಕೂ ಕ್ಯಾರೇ ಎನ್ನದೇ ತಮ್ಮ ಪಾಡಿಗೆ ತಾವು ಆರಾಮವಾಗಿದ್ದರು. ಇಲ್ಲಿಯವರೆಗೆ ಬಹಿರಂಗವಾಗಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರದ ತಾಪ್ಸಿ ಪನ್ನು, ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಏಕೆ ಹಂಚಿಕೊಂಡಿಲ್ಲ ಎಂಬುದರ ಹಿಂದಿರುವ ಅಸಲಿ ಕಾರಣವನ್ನು ತಿಳಿಸಿದ್ದಾರೆ. ಇದರ ಹಿಂದಿರುವ ಘನ ಉದ್ದೇಶವನ್ನೂ ಅವರು ಬಹಿರಂಗಪಡಿಸಿದ್ದಾರೆ.

ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?
ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಎಂದು ತಾಪ್ಸಿ ಪನ್ನು ಹೇಳಿದ್ದೇಕೇ?

ತಾಪ್ಸಿ ಪನ್ನು ತಮ್ಮ ಗುಟ್ಟಾದ ಮದುವೆಯ ಹಿಂದಿನ ಕಾರಣವನ್ನು ವಿವರಿಸುತ್ತಾ ಹೀಗೇ ಹೇಳುತ್ತಾರೆ- “ನನ್ನ ಮದುವೆಯ ಕುರಿತಾಗಿ ಯಾವುದೇ ರಹಸ್ಯ/ಸೀಕ್ರೆಟ್​ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ವೈಯಕ್ತಿಕ ಜೀವನ ಸಾರ್ವಜನಿಕವಾಗುವುದು ನನಗೆ ವೈಯಕ್ತಿಕವಾಗಿ ಇಷ್ಟವಿರಲಿಲ್ಲ. ಹೀಗಾಗಿ ಮದುವೆ ಸಮಾರಂಭಗಳ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಲು ನಾನು ಬಯಸಲಿಲ್ಲ” ಎಂದು ಹೇಳಿದರು. ಸದ್ಯ ನಟಿಯ ಈ ವೈರಲ್ ಹೇಳಿಕೆ ಹೊರಬೀಳುತ್ತಿದ್ದಂತೆ ಅವರ ಫ್ಯಾನ್ಸ್​ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಅಂತೂ ತಾಪ್ಸಿ ಪನ್ನು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿದೆ.

ಅದೇನೇ ಇರಲಿ ವೈಯಕ್ತಿಕ ಜೀವನಕ್ಕೂ ಸಾರ್ವಜನಿಕ ಜೀವನಕ್ಕೂ ವ್ಯತ್ಯಾಸ ಇರುವುದನ್ನು ಪ್ರತಿಯೊಬ್ಬರೂ ಅರಿತುಕೊಂಡು ನಮ್ಮ ಜೀವನವನ್ನು ನಾವುಗಳು ನಡೆಸಿಕೊಂಡು ಹೋಗಬೇಕು. ಅಲ್ಲದೇ ಎಲ್ಲರಿಗೂ ಅವರ ವೈಯಕ್ತಿಕ ಜೀವನವನ್ನು ಅನುಭವಿಸಲು ಅವಕಾಶ ನೀಡಬೇಕು.

ಇವುಗಳನ್ನೂ ಓದಿ:

Leave a Reply

Your email address will not be published. Required fields are marked *