ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ
ಪ್ಯಾರಿಸ್: ನಿನ್ನೆ ಆಗಸ್ಟ್ 08 ರಂದು ನಡೆದ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಜಾವಲಿನ್ ಎಸೆದು ಚಿನ್ನದ ಪದಕ ಗೆಲ್ಲುವುದರ ಜತೆಗೆ ಹೊಸ ದಾಖಲೆಗೆ ಅಣಿಯಾದರು. ಇನ್ನು 89.45 ಮೀ. ಜಾವಲಿನ್ ಎಸೆತದಿಂದ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಭಾರತೀಯರನ್ನು ಹೆಮ್ಮೆಪಡಿಸುವುದರಲ್ಲಿ ಹಿಂದೆ ಸರಿಯಲಿಲ್ಲ. ಚಿನ್ನದ ಓಟದಲ್ಲಿ ಈ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಾಗಲೇ ಇದು ರೋಚಕವಾಗಿರಲಿದೆ ಎಂದು ಕ್ರೀಡಾ ಅಭಿಮಾನಿಗಳು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿದ್ದರು. ಆದ್ರೆ, ಅಂತಿಮವಾಗಿ ಈ ಓಟದಲ್ಲಿ ಚಿನ್ನದ ಪದಕ ಗೆಲ್ಲಲು ನೀರಜ್ ವಿಫಲರಾದರು. ತಮ್ಮ ಮಗ ಚಿನ್ನದ ಪದಕ ಗೆಲ್ಲದೇ ಹೋದರು ಬೇಸರಕ್ಕೊಳಗಾಗದ ಚೋಪ್ರಾ ತಾಯಿ, ನದೀಮ್ ಕೂಡ ನನ್ನ ಮಗನೇ ಎಂದು ಹೇಳಿರುವುದು ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದಿನಿಂದಲೂ ಪಾಕಿಸ್ತಾನ-ಭಾರತದ ನಡುವೆ ದ್ವೇಷ, ವೈರತ್ವವೇ ಕೂಡಿದೆ. ಆದ್ರೆ, ಅದನ್ನೆಲ್ಲಾ ಒಂದು ನಿಮಿಷ ಬದಿಗಿಟ್ಟು ಮಮತೆಯಿಂದ ಮಾತನಾಡಿದ ನೀರಜ್ ಚೋಪ್ರಾ ತಾಯಿ ಸರೋಜಾ ದೇವಿ, “ನನ್ನ ಮಗ ಚಿನ್ನ ಗೆಲ್ಲಲು ಸೋತ ಎಂಬ ಬೇಸರವಿದೆ. ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅತ್ಯುತ್ತಮ ಸವಾಲು ಎಸಗಿದ ಅರ್ಷದ್ ನದೀಮ್ ಅವರಿಗೆ ನನ್ನ ಅಭಿನಂದನೆಗಳು. ನದೀಮ್ ಕೂಡ ನನ್ನ ಮಗನೇ” ಎಂದು ಹೇಳಿದರು. ಸರೋಜಾ ಅವರ ಈ ಮಾತುಗಳು ವೈರಲ್ ಆಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ನೆಟ್ಟಿಗರು, ತಮ್ಮ ಮಗ ಸೋತರೂ ಸಹ ಬೇಸರಗೊಳ್ಳದೆ ಪ್ರತಿಸ್ಪರ್ಧಿಯಾಗಿದ್ದ ಪಾಕ್ನ ಅರ್ಷದ್ಗೆ ನೀವು ಕೊಟ್ಟ ಮೆಚ್ಚುಗೆ ಗೌರವಿಸುವಂತದ್ದು ಎಂದು ಅಭಿಪ್ರಾಯಿಸಿದ್ದಾರೆ
ಈ ಹಿನ್ನೆಲೆಯಲ್ಲಿ ನೀರಜ್ ಛೋಪ್ರಾ ತಾಯಿಯಾದ ಸರೋಜಾದೇವಿಯವರು ಪ್ರತಿಕ್ರಿಯೆ ನೀಡಿದ್ದು ಮಗ ಹಾಗೂ ಆತನ ಪ್ರತಿಸ್ಪರ್ಧಿಯ ಕುರಿತು ಮಾತನಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿವೆ. “ನೀರಜ್ ಈ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ನಮಗೆಲ್ಲ ಸಾಕಷ್ಟು ತೃಪ್ತಿ ಇದೆ. ಜೊತೆಗೆ ಮಗನ ಪ್ರತಿಸ್ಪರ್ಧಿಯಾಗಿ ಚಿನ್ನ ಗೆದ್ದಿರುವ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗನೇ” ಎಂದು ಸಂತಸದಿಂದ ಹೇಳಿದರು. ನೀರಜ್ರ ತಾಯಿಯವರ ಹೃದಯಸ್ಪರ್ಶಿ ಮಾತುಗಳಿಗೆ ಇದೀಗ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
ಇವುಗಳನ್ನೂ ಓದಿ:
-
- ಸೆಕ್ಸ್ಟಿಂಗ್: ಕಾಮಾಸಕ್ತಿಯ ನಿಯಂತ್ರಣ ಮತ್ತು ಜಾಗೃತಿ
- ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಇನ್ನಿಲ್ಲ, ಸಾವಿಗೆ ಇದೇ ಕಾರಣ!
- ಝೀಕಾ: ಮುನ್ನೆಚ್ಚರಿಕೆಯಾಗಿರಿ – ಆರೋಗ್ಯ ಇಲಾಖೆ ಸೂಚನೆ
- ಬಾಲರಾಜು ಮಾಸ್ತರ್: ವಿದ್ಯಾರ್ಥಿಗಳ ಕಣ್ಣೀರು ಹನಿ ವಿದಾಯ
- ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಪರಿಮಳ ಈಗ ಹೇಗಿದ್ದಾರೆ ಗೊತ್ತಾ?
- ಜೂನಿಯರ್ ಎನ್ಟಿಆರ್ ವಾಚ್ ಬೆಲೆ ಕೇಳಿದ್ರೆ ದಂಗಾಗ್ತೀರಿ! ವಾಚ್ ಬೆಲೆ ಇಷ್ಟೊಂದಾ..!!
- ದ್ವಿತೀಯ ಪಿಯುಸಿ ಮರು ಎಣಿಕೆ & ಮೌಲ್ಯಮಾಪನಕ್ಕೆ ಈಗಲೇ ಅರ್ಜಿ ಸಲ್ಲಿಸಿ: ಸಂಪೂರ್ಣ ಮಾಹಿತಿ ಇಲ್ಲಿದೆ
- ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವೈರಲ್ ಮಾತುಗಳು
- 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
- ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ