ರೇಷನ್‌ ಕಾರ್ಡ್‌ ತಿದ್ದುಪಡಿಗೆ ಆಗಸ್ಟ್ 10 ಕೊನೆಯ ದಿನಾಂಕ: ತಿದ್ದುಪಡಿ ದಿನಾಂಕದ ವಿಸ್ತರಣೆ ಇಲ್ಲರೇಷನ್‌ ಕಾರ್ಡ್‌ ತಿದ್ದುಪಡಿಗೆ ಆಗಸ್ಟ್ 10 ಕೊನೆಯ ದಿನಾಂಕ: ತಿದ್ದುಪಡಿ ದಿನಾಂಕದ ವಿಸ್ತರಣೆ ಇಲ್ಲ

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಆಗಸ್ಟ್ 10 ಕೊನೆಯ ದಿನಾಂಕ: ತಿದ್ದುಪಡಿ ದಿನಾಂಕದ ವಿಸ್ತರಣೆ ಇಲ್ಲ

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಆಗಸ್ಟ್ 10 ಕೊನೆಯ ದಿನಾಂಕ: ತಿದ್ದುಪಡಿ ದಿನಾಂಕದ ವಿಸ್ತರಣೆ ಇಲ್ಲ
ರೇಷನ್‌ ಕಾರ್ಡ್‌ ತಿದ್ದುಪಡಿಗೆ ಆಗಸ್ಟ್ 10 ಕೊನೆಯ ದಿನಾಂಕ: ತಿದ್ದುಪಡಿ ದಿನಾಂಕದ ವಿಸ್ತರಣೆ ಇಲ್ಲ

Ration Card Correction Last Day ರೇಷನ್‌ ಕಾರ್ಡ್‌ ತಿದ್ದುಪಡಿ: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಕೊನೆಯ ಅವಕಾಶ ನೀಡಲಾಗಿದೆ. ಶನಿವಾರ (ಆ.10) ಕಡೆಯ ದಿನವಾಗಿದ್ದು, ತಿದ್ದುಪಡಿ ಅರ್ಜಿ ಸಲ್ಲಿಸುವ ಅವಕಾಶವನ್ನು ಮತ್ತೆ ವಿಸ್ತರಣೆ ಮಾಡಲ್ಲ ಎಂದ ಕರ್ನಾಟಕ ಆಹಾರ ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಕಳೆದ ಒಂದು ತಿಂಗಳಿಂದ ಆಹಾರ ಇಲಾಖೆ ಅವಕಾಶ ನೀಡಿದ್ದು, ಆಗಸ್ಟ್‌ 10 ಕಡೆಯ ದಿನ ಎಂದು ನಿಗದಿ ಪಡಿಸಲಾಗಿದೆ. ಸದರಿ ದಿನಾಂಕದ ಒಳಗಾಗಿ ರೇಷನ್ ಕಾರ್ಡ್ ನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸದೇ ಇದ್ದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ವಿನೇಶ್ ಫೋಗಟ್ ಗೆ ಮೆಡಲ್ ದಕ್ಕದಿರಲು ಇದುವೇ ಕಾರಣ ಎಂದ ಕೋಚ್

ಜುಲೈ 1 ರಿಂದ ಪಡಿತರ ಚೀಟಿಯ ತಿದ್ದುಪಡಿ ಆಹಾರ ಇಲಾಖೆಯು ಅವಕಾಶ ನೀಡಿತ್ತು. ಕಳೆದ 40 ದಿನಗಳಲ್ಲಿ ಸಾವಿರಾರು ಫಲಾನುಭವಿಗಳು ಅಗತ್ಯ ತಿದ್ದುಪಡಿ ಮಾಡಿಸಿದ್ದಾರೆ. ಇನ್ನು ಆಗಸ್ಟ್‌ 10 (ಶನಿವಾರ) ಕೊನೆಯ ದಿನವಾಗಿದ್ದು, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಿದ್ದುಪಡಿಗೆ ಅವಕಾಶವಿದೆ. ಬಾಕಿ ಉಳಿಸಿಕೊಂಡವರು ಶೀಘ್ರವೇ ಅಗತ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಬಹುದು.

ಈಗಾಗಲೇ 40 ದಿನ ತಿದ್ದುಪಡಿಗೆ ಅವಕಾಶ ನೀಡಿದ್ದ ಕಾರಣ ಮತ್ತೆ ಅವಕಾಶವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ. ಮತ್ತೆ ತಿದ್ದುಪಡಿಗೆ ಕನಿಷ್ಠಿ 3 ರಿಂದ 6 ತಿಂಗಳು ಕಾಯಬೇಕಾಗುತ್ತದೆ.

ರೇಷನ್‌ ಕಾರ್ಡ್‌ ತಿದ್ದುಪಡಿ: ಏನೆಲ್ಲಾ ತಿದ್ದುಪಡಿ ಮಾಡಿಸಿಕೊಳ್ಳಬಹುದು?

ಕಾರ್ಡುದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ಕೊಡಲಾಗಿದೆ.

ಏನೆಲ್ಲಾ ದಾಖಲೆ ನೀಡಬೇಕು?

ತಿದ್ದುಪಡಿ ಸಂದರ್ಭದಲ್ಲಿ ಅರ್ಜಿದಾರರು ಆಧಾರ್ ಕಾರ್ಡ್ ಪ್ರತಿ, ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ದಾಖಲೆ ಇಟ್ಟುಕೊಂಡಿರಬೇಕು.

ಇದನ್ನೂ ಓದಿ: ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ

ರೇಷನ್‌ ಕಾರ್ಡ್‌ ತಿದ್ದುಪಡಿ: ಎಲ್ಲೆಲ್ಲಿ ತಿದ್ದುಪಡಿಗೆ ಅವಕಾಶ:

ಗ್ರಾಮ ಒನ್
ಜಿಲ್ಲಾ ಒನ್‌ ಕೇಂದ್ರಗಳು
ಕರ್ನಾಟಕ ಒನ್

ಅನರ್ಹರು ಬಿಪಿಎಲ್‌ ಕಾರ್ಡ್‌ ಹಿಂದಿರುಗಿಲು ಸೂಚನೆ

ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತಲೂ ಹೆಚ್ಚಿರುವುದು, ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ವುಳ್ಳವರು, ಹಾಗೂ ಈಗಾಗಲೇ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಕಟ್ಟುವಂತವರು ಅಂದರೆ ಐಟಿ ರಿಟರ್ನ್ಸ್ ಮಾಡುವವಂತಹವರೇನಾದರೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರು ಕೂಡಲೇ ತಮ್ಮ ಬಿಪಿಎಲ್ ಕಾರ್ಡ್ ನ್ನು ಆಹಾರ ಇಲಾಖೆಗೆ ಮರಳಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣ ಸ್ವಂತ ಮನೆ ಹೊಂದಿರುವ ವರು, ಸರ್ಕಾರಿ ಅರೆ ಸರ್ಕಾರಿ ಉದ್ಯೋಗದಲ್ಲಿರುವವರು ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಾಗಿರುವುದಿಲ್ಲ. ಕರ್ನಾಟಕ ಪ್ರಿವೆನ್ಷನ್‌ ಆಫ್‌ ಅನ್‌ಆಥರೈಜಡ್‌ ಪೊಸಿಷನ್‌ ಆಫ್‌ ರೇಷನ್‌ ಕಾರ್ಡ್‌ 1977ರ ಆದೇಶದಂತೆ ಅರ್ಹವಲ್ಲದ ಅಥವಾ ಅನರ್ಹತೆಯ ಜನರು ಕಾನೂನು ಬಾಹಿರವಾಗಿ ಬಿಪಿಎಲ್ ರೇಷನ್ ಕಾರ್ಡ್ ನ್ನು ಹೊಂದುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ.

ಒಂದು ವೇಳೆ ಯಾವುದೇ ರೀತಿಯ ಅನರ್ಹರು ಬಡಜನರಿಗೆ ಹಂಚಲಾಗುವ ಬಡತನ ರೇಖೆಗಿಂತ ಕೆಳಗಿರುವ ಜನರು ಹೊಂದಿರಬಹುದಾದ ಬಿಪಿಎಲ್ ಕಾರ್ಡ್ ನ್ನು ಹೊಂದಿದ್ದರೆ ಅಂತಹ ಜನರು ಆಗಸ್ಟ್ 31 ರ ಳಗಾಗಿ ತಹಶೀಲ್ದಾರ್ ಅವರ ಕಛೇರಿಯ ಹಾರ ಶಾಖೆಗೆ ಅಥವಾ ಆಹಾರ ನಾರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಲಾಖೆಯ ಜಂಟಿ ನಿರ್ದೇಶಕರ ಕಛೇರಿಗೆ ನೀಡುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿಅನರ್ಹ ಪಡಿತರ ಚೀಟಿದಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇವುಗಳನ್ನೂ ಓದಿ:

Leave a Reply

Your email address will not be published. Required fields are marked *