Site icon Super News Daily

ಜೂನಿಯರ್ ಎನ್​ಟಿಆರ್​ ವಾಚ್​ ಬೆಲೆ ಕೇಳಿದ್ರೆ ದಂಗಾಗ್ತೀರಿ​! ವಾಚ್ ಬೆಲೆ ಇಷ್ಟೊಂದಾ..!!

ಜೂನಿಯರ್ ಎನ್​ಟಿಆರ್​ ವಾಚ್​ ಬೆಲೆ ಕೇಳಿದ್ರೆ ದಂಗಾಗ್ತೀರಿ​! ವಾಚ್ ಬೆಲೆ ಇಷ್ಟೊಂದಾ..!!

ಜೂನಿಯರ್ ಎನ್​ಟಿಆರ್​ ವಾಚ್​ ಬೆಲೆ ಕೇಳಿದ್ರೆ ದಂಗಾಗ್ತೀರಿ​! ವಾಚ್ ಬೆಲೆ ಇಷ್ಟೊಂದಾ..!!

ಜೂನಿಯರ್ ಎನ್​ಟಿಆರ್​ ವಾಚ್: ಆತ್ಮೀಯ ಸ್ನೇಹಿತರೇ ಸೆಲೆಬ್ರಿಟಿಗಳದ್ದು ದುಬಾರಿ ಜೀವನ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿಕ್ಕ ವಾಚ್​ನಿಂದ ಹಿಡಿದು ದೊಡ್ಡ ಕಾರುಗಳವರೆಗೂ ಸೆಲೆಬ್ರಿಟಿಗಳು ಬಳಸುವ ವಸ್ತುಗಳೆಲ್ಲ ಬಹಳಷ್ಟು ದುಬಾರಿಯಾಗಿರುತ್ತವೆ. ಒಮ್ಮೊಮ್ಮೆ ಅವರು ಬಳಸುವ ವಸ್ತುಗಳ ಬೆಲೆ ತಿಳಿದು ಹುಬ್ಬೇರಿಸಿರುತ್ತೇವೆ. ಇದೀಗ ಅಂಥದ್ದೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.

ಟಾಲಿವುಡ್ ಚಿತ್ರ ಜಗತ್ತಿನ ಅತ್ಯದ್ಭುತ ನಟ ಜೂನಿಯರ್ ಎನ್​ಟಿಆರ್ ದಕ್ಷಿಣ ಚಿತ್ರರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದು, ಸಾಲು ಸಾಲು ಚಿತ್ರಗಳನ್ನು ನೀಡುತ್ತಿರುವ ಜೂನಿಯರ್ ಎನ್​ಟಿಆರ್ ಸದ್ಯ ದೇವರ ಎಂಬ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವುದು ತಮಗೆಲ್ಲ ತಿಳಿದ ಸಂಗತಿಯೇ ಆಗಿದೆ. ಈ ಚಿತ್ರವನ್ನು ಇದೇ ವರ್ಷದ ಅಕ್ಟೋಬರ್ 10 ರಂದು ರಿಲೀಸ್ ಮಾಡುವುದಾಗಿ ಈಗಾಗಲೇ ಚಿತ್ರರಂಗ ಘೋಷಿಸಿದ್ದು, ಸಿನಿಮಾ ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿನಿಮಾದ ಶೂಟಿಂಗ್ ಕಾರ್ಯವು ಚುರುಕುಗೊಂಡಿದ್ದು ಭರದಿಂದ ಸಾಗಿದೆ.

ನಿನ್ನೆಯ ದಿನ ಟಿಲ್ಲು ಸ್ಕ್ವೇರ್​ ಸಿನಿಮಾದ ಸಕ್ಸಸ್​ ಮೀಟ್​ ನಡೆಯಿತು. ಈ ಕಾರ್ಯಕ್ರಮಕ್ಕೆ ಖ್ಯಾತ ನಟ ಜೂನಿಯರ್ ಎನ್​ಟಿಆರ್​ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಎನ್​ಟಿಆರ್​, ತಮ್ಮ ಬಹುನಿರೀಕ್ಷಿತ ದೇವರ ಚಿತ್ರದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ದೇವರ ಚಿತ್ರವು ನಿಮ್ಮೆಲ್ಲರ ನಿರೀಕ್ಷೆಗಳನ್ನು ಪೂರೈಸುವಂಥ ಚಿತ್ರವಾಗಿದ್ದು, ನಿಮ್ಮೆಲ್ಲರ ಕಾಲರ್ ಎತ್ತುವಂತೆ ಮಾಡುತ್ತದೆ. ಸ್ವಲ್ಪ ತಡವಾದರೂ ಸಹ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಸಕಾರಾತ್ಮಕ ನುಡಿಗಳನ್ನಾಡಿದರು.

ಜೂನಿಯರ್ ಎನ್​ಟಿಆರ್​ ವಾಚ್​ ಬೆಲೆ ಕೇಳಿದ್ರೆ ದಂಗಾಗ್ತೀರಿ​! ವಾಚ್ ಬೆಲೆ ಇಷ್ಟೊಂದಾ..!!

ಆದರೆ, ಈ ಸಮಾರಂಭದಲ್ಲಿ ತಾರಕ್ ಧರಿಸಿದ್ದ ವಾಚ್ ಎಲ್ಲರ ಗಮನವನ್ನೂ ಸೆಳೆಯಿತು. ಅದರಲ್ಲೂ ವಿಶೇಷವಾಗಿ ಅವರು ಧರಿಸಿದ್ದ ಆ ವಾಚ್​ ಬೆಲೆಯನ್ನು ಕೇಳಿ ಎಲ್ಲರೂ ದಂಗಾದರು.

ಜೂನಿಯರ್ ಎನ್​ಟಿಆರ್​ ವಾಚ್ ಬೆಲೆ:

ಹಾಗಾದರೆ ಜೂನಿಯರ್ ಎನ್​ಟಿಆರ್ ಧರಿಸಿದ್ದ ಆ ವಾಚ್ ನ ಬೆಲೆಯನ್ನು ಕೇಳಿದರೆ ನಿಜಕ್ಕೂ ನೀವು ದಂಗಾಗೋದು ಗ್ಯಾರೆಂಟಿ. ಏಕೆಂದರೆ ಜೂನಿಯರ್ ಎನ್​ಟಿಆರ್ ಧರಿಸಿದ್ದ ಆ ವಾಚ್ ನ ಮೊತ್ತದಲ್ಲಿ ಬರೋಬ್ಬರಿ ಐದು ಕುಟುಂಬಗಳು ನಿಶ್ಚಿಂತೆಯಿಂದ ಜೀವಿಸಬಹುದಾಗಿದೆ.

ಹಾಗಾದರೆ ಜೂನಿಯರ್ ಎನ್​ಟಿಆರ್ ಧರಿಸಿದ್ದ ಆ ವಾಚ್ ಯಾವುದು? ಅದರ ಬೆಲೆ ಎಷ್ಟು? ಅದರ ವಿಶೇಷತೆಗಳಾದರೂ ಏನು? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಹೌದು ತಾರಕ್ ಧರಿಸಿದ್ದ ಆ ವಾಚ್ ಯಾವುದೆಂದರೆ ‘ಒಡೋಮರ್ ಪಿಗೆಟ್ ರಾಯಲ್ ಓಕ್’ ಎಂಬ ಬ್ರಾಂಡ್‌ಗೆ ಸೇರಿದ ಕೋಟಿ ಮೊತ್ತದ ವಾಚ್ ಆಗಿದೆ. ಇದರ ಬೆಲೆ 1,89,000 ಅಮೇರಿಕನ್ ಡಾಲರ್. ಅಂದರೆ, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 1,57,32,455 ರೂಪಾಯಿ. ಈ ವಾಚ್​ ವಿವಿಧ ಮಾಡೆಲ್​ಗಳನ್ನು ಸಹ ಹೊಂದಿದೆ. ಮಾಡೆಲ್​ಗಳನ್ನು ಅವಲಂಬಿಸಿ ಬೆಲೆಗಳು ಬದಲಾಗುತ್ತವೆ.

ಜೂ.ಎನ್​ಟಿಆರ್​ ಬಳಿ ಸ್ಪೋರ್ಟ್ಸ್ ವಾಚ್, ಕಸ್ಟಮೈಸ್ ಮಾಡಿದ ವಾಚ್ ಮತ್ತು ಹಲವು ರೀತಿಯ ವಾಚ್ ಸಂಗ್ರಹ ಲಭ್ಯವಿದೆ. ಅವರ ಬಳಿ ಇದಕ್ಕೂ ಹೆಚ್ಚಿನ ಮೊತ್ತದ ಅಂದರೆ ಬರೋಬ್ಬರಿ ಎಂಟು ಕೋಟಿ ಮೌಲ್ಯದ ವಾಚ್ ಕೂಡ ಇದೆ.

ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಾವು ಇಡೀ ಜೀವನ ದುಡಿದರು ಈ ವಾಚ್​ ತೆಗೆದುಕೊಳ್ಳಲು ಆಗುವುದಿಲ್ಲ ಎಂದು‌ ಹಲವರು ಹೇಳಿದ್ದರೆ ಇನ್ನೂ ಕೆಲವರು ಇದರಲ್ಲಿ ಐದು ಕುಟುಂಬಗಳ ನಿರ್ವಹಣೆ ಮಾಡಬಹುದಿತ್ತು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಸದ್ಯ ಈ ವಾಚ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ತಾರಕ್ ಅವರ ಈ ವಾಚ್ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ಸ್​ ರೂಪದಲ್ಲಿ ಹಂಚಿಕೊಳ್ಳಿ.

ಇವುಗಳನ್ನೂ ಓದಿ:

Exit mobile version