ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ

ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ

ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ
ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ

ಪ್ಯಾರಿಸ್: ನಿನ್ನೆ ಆಗಸ್ಟ್ 08 ರಂದು ನಡೆದ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್‌ ಜಾವಲಿನ್ ಎಸೆದು ಚಿನ್ನದ ಪದಕ ಗೆಲ್ಲುವುದರ ಜತೆಗೆ ಹೊಸ ದಾಖಲೆಗೆ ಅಣಿಯಾದರು. ಇನ್ನು 89.45 ಮೀ. ಜಾವಲಿನ್ ಎಸೆತದಿಂದ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಭಾರತೀಯರನ್ನು ಹೆಮ್ಮೆಪಡಿಸುವುದರಲ್ಲಿ ಹಿಂದೆ ಸರಿಯಲಿಲ್ಲ. ಚಿನ್ನದ ಓಟದಲ್ಲಿ ಈ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಾಗಲೇ ಇದು ರೋಚಕವಾಗಿರಲಿದೆ ಎಂದು ಕ್ರೀಡಾ ಅಭಿಮಾನಿಗಳು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿದ್ದರು. ಆದ್ರೆ, ಅಂತಿಮವಾಗಿ ಈ ಓಟದಲ್ಲಿ ಚಿನ್ನದ ಪದಕ ಗೆಲ್ಲಲು ನೀರಜ್ ವಿಫಲರಾದರು. ತಮ್ಮ ಮಗ ಚಿನ್ನದ ಪದಕ ಗೆಲ್ಲದೇ ಹೋದರು ಬೇಸರಕ್ಕೊಳಗಾಗದ ಚೋಪ್ರಾ ತಾಯಿ, ನದೀಮ್ ಕೂಡ ನನ್ನ ಮಗನೇ ಎಂದು ಹೇಳಿರುವುದು ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ
ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ

ಈ ಹಿಂದಿನಿಂದಲೂ ಪಾಕಿಸ್ತಾನ-ಭಾರತದ ನಡುವೆ ದ್ವೇಷ, ವೈರತ್ವವೇ ಕೂಡಿದೆ. ಆದ್ರೆ, ಅದನ್ನೆಲ್ಲಾ ಒಂದು ನಿಮಿಷ ಬದಿಗಿಟ್ಟು ಮಮತೆಯಿಂದ ಮಾತನಾಡಿದ ನೀರಜ್ ಚೋಪ್ರಾ ತಾಯಿ ಸರೋಜಾ ದೇವಿ, “ನನ್ನ ಮಗ ಚಿನ್ನ ಗೆಲ್ಲಲು ಸೋತ ಎಂಬ ಬೇಸರವಿದೆ. ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅತ್ಯುತ್ತಮ ಸವಾಲು ಎಸಗಿದ ಅರ್ಷದ್ ನದೀಮ್ ಅವರಿಗೆ ನನ್ನ ಅಭಿನಂದನೆಗಳು. ನದೀಮ್ ಕೂಡ ನನ್ನ ಮಗನೇ” ಎಂದು ಹೇಳಿದರು. ಸರೋಜಾ ಅವರ ಈ ಮಾತುಗಳು ವೈರಲ್ ಆಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ನೆಟ್ಟಿಗರು, ತಮ್ಮ ಮಗ ಸೋತರೂ ಸಹ ಬೇಸರಗೊಳ್ಳದೆ ಪ್ರತಿಸ್ಪರ್ಧಿಯಾಗಿದ್ದ ಪಾಕ್ನ ಅರ್ಷದ್ಗೆ ನೀವು ಕೊಟ್ಟ ಮೆಚ್ಚುಗೆ ಗೌರವಿಸುವಂತದ್ದು ಎಂದು ಅಭಿಪ್ರಾಯಿಸಿದ್ದಾರೆ

ಈ ಹಿನ್ನೆಲೆಯಲ್ಲಿ ನೀರಜ್ ಛೋಪ್ರಾ ತಾಯಿಯಾದ ಸರೋಜಾದೇವಿಯವರು ಪ್ರತಿಕ್ರಿಯೆ ನೀಡಿದ್ದು ಮಗ ಹಾಗೂ ಆತನ ಪ್ರತಿಸ್ಪರ್ಧಿಯ ಕುರಿತು ಮಾತನಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿವೆ. “ನೀರಜ್ ಈ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ನಮಗೆಲ್ಲ ಸಾಕಷ್ಟು ತೃಪ್ತಿ ಇದೆ. ಜೊತೆಗೆ ಮಗನ ಪ್ರತಿಸ್ಪರ್ಧಿಯಾಗಿ ಚಿನ್ನ ಗೆದ್ದಿರುವ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗನೇ” ಎಂದು ಸಂತಸದಿಂದ ಹೇಳಿದರು. ನೀರಜ್ರ ತಾಯಿಯವರ ಹೃದಯಸ್ಪರ್ಶಿ ಮಾತುಗಳಿಗೆ ಇದೀಗ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಇವುಗಳನ್ನೂ ಓದಿ:

Leave a Reply

Your email address will not be published. Required fields are marked *