ಚಾಣಕ್ಯ ನೀತಿ ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದುಚಾಣಕ್ಯ ನೀತಿ ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು

ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು

ಚಾಣಕ್ಯ ನೀತಿ ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
ಚಾಣಕ್ಯ ನೀತಿ ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು

ಚಾಣಕ್ಯ ನೀತಿ: ನೀವು ಆಚಾರ್ಯ ಚಾಣಕ್ಯರ ಹೆಸರನ್ನು ಕೇಳಿರಬೇಕು. ವಿಶ್ವದ ಅತ್ಯುತ್ತಮ ವಿದ್ವಾಂಸರಲ್ಲಿ ಇವರ ಹೆಸರು ಕೇಳಿಬರುತ್ತದೆ. ಅವರು ತಮ್ಮ ಜ್ಞಾನ ಮತ್ತು ಅನುಭವದಿಂದ ‘ಚಾಣಕ್ಯ ನೀತಿ ಶಾಸ್ತ್ರ’ವನ್ನು ರಚಿಸಿದ್ದಾರೆ. ಅರ್ಥಶಾಸ್ತ್ರಜ್ಞ ಚಾಣಕ್ಯ ಮಹಾಶಯನು ತನ್ನ ಅರ್ಥಶಾಸ್ತ್ರ ಕೃತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಎದುರಿಸಬಹುದಾದ ದೊಡ್ಡ ಹಾಗೂ ಸಣ್ಣ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಈ ಸಮಾಜದಲ್ಲಿ ನಾವುಗಳು ಗೌರವವನ್ನು ಸಂಪಾದಿಸಬೇಕಾದರೆ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬೆಲ್ಲ ಅಂಶಗಳ ಕುರಿತು ಸಮಗ್ರವಾಗಿ ವಿವರಿಸಿದ್ದಾರೆ. ಈ 5 ತಪ್ಪು ಅಭ್ಯಾಸಗಳು ವ್ಯಕ್ತಿಗಳಲ್ಲಿ ಇದ್ದರೆ ಸಮಾಜದಲ್ಲಿ ಅಂತಹ ವ್ಯಕ್ತಿಗಳಿಗೆ ಗೌರವ ಸಿಗುವುದಿಲ್ಲ. ಹಾಗಾದರೆ ಮನುಷ್ಯನು ಮಾಡಲೇಬಾರದ ಆ 5 ತಪ್ಪು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಸುಳ್ಳು ಹೇಳುವುದು :

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮನುಷ್ಯ ಎಂದಿಗೂ ಸುಳ್ಳು ಹೇಳಬಾರದು ಎಂದು ಹೇಳಿದ್ದಾರೆ. ಸುಳ್ಳು ಹೇಳುವವರನ್ನು ಯಾರೂ ನಂಬುವುದಿಲ್ಲ. ಇದಲ್ಲದೇ ಅವರಿಗೆ ಸಮಾಜದಲ್ಲಿ ಗೌರವವೂ ಸಿಗುವುದಿಲ್ಲ. ಸುಳ್ಳು ಹೇಳುವ ವ್ಯಕ್ತಿಯು ಯಾವ ವ್ಯಕ್ತಿಯ ನಂಬಿಕೆಗೂ ಅರ್ಹನಾಗುವುದಿಲ್ಲ. ಅಂಥವರನ್ನು ಯಾರೂ ಯಾವ ಕಾಲಕ್ಕೂ ನಂಬುವುದಿಲ್ಲ ಆದ್ದರಿಂದ ಸುಳ್ಳು ಹೇಳುವ ಪ್ರವೃತ್ತಿಯು ಯಾವ ಮನುಷ್ಯನಿಗೂ ಶ್ರೇಯಸ್ಸು ತರುವುದಿಲ್ಲ.

ದುರಾಸೆ:

ಸಮಾಜದ ಜನರು ದುರಾಸೆ ಇರುವವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ದುರಾಸೆಯಿಂದಾಗಿ, ಒಬ್ಬ ವ್ಯಕ್ತಿಯು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ವಿಶೇಷವಾಗಿ ನಿಮ್ಮ ಸಂಬಂಧಗಳು. ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ ಒಬ್ಬ ವ್ಯಕ್ತಿಗೆ ದುರಾಸೆಯಾದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಜನರು ದುರಾಸೆಯಿಂದ ದೂರವಿರಲು ಇಷ್ಟಪಡುತ್ತಾರೆ. ದುರಾಸೆಯು ತನ್ನ ಕೇಡನ್ನು ಉಂಟು ಮಾಡುವುದಲ್ಲದೇ ಇತರರ ಮೇಲೂ ಹೊಟ್ಟೆಕಿಚ್ಚಿನ ಭಾವನೆಯನ್ನು ಮೂಡಿಸುತ್ತದೆ. ಆದ್ದರಿಂದ ಯಾವನು ದುರಾಸೆಯನ್ನು ಹೊಂದಿರುತ್ತಾನೋ ಅಂತಹ ವ್ಯಕ್ತಿಯು ಸಮಾಜದ ಗೌರವಕ್ಕೆ ಪಾತ್ರನಾಗುವುದಿಲ್ಲ.

ವಿಷಯವನ್ನು ತಿರುಚುವವರು:

ಆಚಾರ್ಯ ಚಾಣಕ್ಯರು ಅಲ್ಲಿ ಇಲ್ಲಿ ವಿಷಯಗಳನ್ನು ತಿರುಚುವವರು ಬಗ್ಗೆ ಹೇಳಿದ್ದಾರೆ. ಅವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಯಾವುದೇ ವ್ಯಕ್ತಿಯು ನಿಮ್ಮ ಮೇಲೆ ನಂಬಿಕೆಯನ್ನಿಟ್ಟು ಅವರ ಜೀವನದ ರಹಸ್ಯ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಂಡಾಗ ಅಂತಹ ವಿಷಯಗಳನ್ನು ಯಾರೊಂದಿಗೂ ಬಹಿರಂಗಪಡಿಸದಿರಿ. ಹಾಗೆಯೇ ಯಾವುದೇ ವಿಷಯವನ್ನು ಯಥಾವತ್ತಾಗಿ ಹೇಳದೇ ಇನ್ನೊಬ್ಬರನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಅಥವಾ ಬೇರೆಯವರು ಹೇಳಿರುವಂಥದ್ದನ್ನು ತಿರುಚಿ ತನ್ನ ಲಾಭಕ್ಕಾಗಿ ಸುಳ್ಳು ಹೇಳುವ ಜನರೂ ಸಹ ಈ ಸಮಾಜದ ಗೌರವಕ್ಕೆ ಪಾತ್ರರಾಗುವುದಿಲ್ಲ.

ಸೋಮಾರಿತನ:

ಸೋಮಾರಿಯಾದವರಿಗೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾನೆ. ಇದಲ್ಲದೆ, ಸೋಮಾರಿಗಳನ್ನು ಯಾರೂ ಗೌರವಿಸುವುದಿಲ್ಲ. ಯಾವುದೇ ಕೆಲಸವನ್ನು ಚೈತನ್ಯದಿಂದ ಮಾಡುವ ವ್ಯಕ್ತಿಯು ಸಮಾಜದ ಗೌರವಕ್ಕೆ ಪಾತ್ರನಾಗುತ್ತಾನೆ. ಸಮಾಜವು ಸೋಮಾರಿಗೆ ಎಂದೂ ಗೌರವ ನೀಡದು. ಆದ್ದರಿಂದ ಯಾವುದೇ ಕೆಲಸವನ್ನು ಮಾಡುವಾಗ ಅಸಡ್ಡೆಯನ್ನು ತೋರದೇ ಶ್ರದ್ಧೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ವ್ಯಕ್ತಿಗೆ ಸಮಾಜವು ಗೌರವನ್ನು ನೀಡುತ್ತದೆ.

ಕೆಟ್ಟದಾಗಿ ಮಾತನಾಡಬೇಡಿ:

ಜೀವನದಲ್ಲಿ ಯಾರೊಬ್ಬರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು ಎಂಬ ಮಾತನ್ನು ನೀವು ಆಗಾಗ್ಗೆ ಕೇಳಿರಬಹುದು. ಕೆಟ್ಟದ್ದನ್ನು ಮಾಡುವುದು ಕೆಟ್ಟ ಅಭ್ಯಾಸ ಹಾಗೆಯೇ ಯಾರ ಬಗ್ಗೆಯೂ ಯಾವ ಕಾರಣಕ್ಕೂ ಕೆಟ್ಟದ್ದಾಗಿ ಮಾತನಾಡಬಾರದು. ಆಚಾರ್ಯ ಚಾಣಕ್ಯರ ಪ್ರಕಾರ, ಇತರರಿಗೆ ಕೆಟ್ಟದ್ದನ್ನು ಮಾಡುವವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಆದ್ದರಿಂದ, ತಪ್ಪಾಗಿಯೂ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ. ಕೆಟ್ಟದಾಗಿ ಮಾತನಾಡುವ ವ್ಯಕ್ತಿಗೆ ಸಮಾಜವು ಎಂದಿಗೂ ಮನ್ನಣೆ ನೀಡಲಾರದು.

ಇವುಗಳನ್ನೂ ಓದಿ:

Leave a Reply

Your email address will not be published. Required fields are marked *