ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಪರಿಮಳ ಈಗ ಹೇಗಿದ್ದಾರೆ ಗೊತ್ತಾ?
1992ರಲ್ಲಿ ಬಿಡುಗಡೆಯಾಗಿದ್ದ ಹಳ್ಳಿಮೇಷ್ಟ್ರು ಚಿತ್ರ ಆಗಿನ ಕಾಲದಲ್ಲೇ ಬ್ಲಾಕ್ಬಸ್ಟರ್ ಆಗಿತ್ತು. ಈ ಚಿತ್ರದಲ್ಲಿ ನಟಿಸುವ ಮೂಲಕ ಅನೇಕ ಪ್ರತಿಭೆಗಳು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ಬಹುಸಂಖ್ಯಾತರ ಗಮನ ಸೆಳೆದಿದ್ದು ಪಾತ್ರವೆಂದರೆ ಅದು ಅದು ನಾಯಕಿ ಪರಿಮಳ ಪಾತ್ರ ಎಂದೇ ಹೇಳಬಹುದಾಗಿದೆ. ಏಕೆಂದರೆ ಆ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದ ನಟಿ ತಮ್ಮ ಸಹಜ ನಟನಾ ಕೌಶಲದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಪರಿಮಳ ಪಾತ್ರವನ್ನು ನಿರ್ವಹಿಸದ್ದ ಪರಿಮಳ ಎಂಬ ಪಾತ್ರಧಾರಿಯ ಹೆಸರು ಫರ್ಹೀನ್. ಇವರನ್ನು ಕನ್ನಡಕ್ಕೆ ನಟ ರವಿಚಂದ್ರನ್ ಅವರು ಬಿಂದಿಯಾ ಎಂಬ ಹೆಸರಿನಿಂದ ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದರು. ಪರಿಮಳ ಪಾತ್ರವನ್ನು ನಿಭಾಯಿಸಿದ್ದ ನಟಿ ಫರ್ಹೀನ್ ಪ್ರಭಾಕರ್ ಅಲಿಯಾಸ್ ಬಿಂದಿಯಾ ಈಗ ಹೇಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
90ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ನಟಿ ಫರ್ಹೀನ್ ಅನೇಕ ಬಾಲಿವುಡ್ ಸ್ಟಾರ್ಗಳೊಂದಿಗೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ‘ಜಾನ್ ತೇರೆ ನಾಮ್’ ಎಂಬ ಚಿತ್ರದ ಮೂಲಕ ಬಾಲಿವುಡ್ ಚಿತ್ರಜಗತ್ತಿಗೆ ಧುಮಿಕ ನಟಿ ಫರ್ಹೀನ್ ಬಾಲಿವುಡ್ ನ ಪ್ರಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಸೈನಿಕ ಚಿತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು. ಈ ನಟಿ ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿ ಅನೇಕ ಅಭಿಮಾನಿಗಳ ಕನಸಿನ ಲೋಕದಲ್ಲಿ ಪ್ರವಹಿಸಿದ್ದಾರೆ.
ಚಿತ್ರರಂಗವೇ ಹಾಗೆ ಇಲ್ಲಿ ಕೆಲವು ಅಮೋಘ ನಟ ನಟಿಯರು ಬಂದು ಹಾಗೇಯೇ ತೆರೆಯ ಮರೆಯ ಹಿಂದೆ ಸರಿದು ಹೋಗುತ್ತಾರೆ. ಹಾಗೇಯೇ ಅನೇಕ ನಟ ನಟಿಯರು ಚಿತ್ರರಂಗ ಪ್ರವೇಶಿಸಿ ಔನ್ನತ್ಯದಲ್ಲಿ ಇರುವಾಗಲೇ ತೆರೆಯ ಮರೆಗೆ ಸರಿದು ಬಿಡುತ್ತಾರೆ. ಇದಕ್ಕೆ ನಟಿ ಫರ್ಹೀನ್ ಕೂಡ ಹೊರತಾಗಿಲ್ಲ. ಏಕೆಂದರೆ ಅವರೂ ಕೂಡ ಬಹುಬೇಗನೇ ತೆರೆಯ ಮರೆಗೆ ಸರಿದು ಹೋದರು. ಬಾಲಿವುಡ್ ಚಿತ್ರ ಜಗತ್ತಿಗೆ ಪರಿಚಯವಾಗಿದ್ದ ನಟಿ ಫರ್ಹೀನ್ ಅವರನ್ನು ಜೂನಿಯರ್ ಮಾಧುರಿ ದೀಕ್ಷಿತ್ ಎಂದೇ ಕರೆಯಲಾಗುತ್ತಿತ್ತು. 1992 ರಲ್ಲಿ ಜಾನ್ ತೇರೆ ನಾಮ್ ಚಿತ್ರವು ಬಿಡುಗಡೆಯಾದ ನಂತರ ಅದರ ಪ್ರಖ್ಯಾತಿಯು ಫರ್ಹೀನ್ ಅವರಿಗೆ ‘ಮಾಧುರಿ ದೀಕ್ಷಿತ್-2’ ಎಂದೇ ಹೆಸರು ತಂದು ಕೊಟ್ಟಿತು.
ಫರ್ಹೀನ್ 90 ರ ದಶಕದಲ್ಲಿ ಜನಪ್ರಿಯ ಹೆಸರಾಗಿತ್ತು ಆದರೆ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಟನೆಯನ್ನು ತ್ಯಜಿಸಲು ನಿರ್ಧರಿಸಿದರು ಮತ್ತು ಮದುವೆಯಾಗಲು ನಿರ್ಧರಿಸಿದರು. ನಟಿ ಫರ್ಹೀನ್ ಅಂದಿನ ಕಾಲದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರನ್ನು ವಿವಾಹವಾದರು. ಇಷ್ಟೆಲ್ಲ ಪ್ರಖ್ಯಾತಿಯನ್ನು ಹೊಂದಿದ್ದ ನಟಿ ಪ್ರಸಿದ್ಧ ಭಾರತೀಯ ಕ್ರಿಕೆಟಿಗರಾದ ಮನೋಜ್ ಪ್ರಭಾಕರ್ ಅವರನ್ನು ಮದುವೆಯಾದ ತರುವಾಯ ತಮ್ಮ ನಟನಾ ಜೀವನಕ್ಕೆ ವಿದಾಯ ಹೇಳಿದರು.
ಮನೋಜ್ ಪ್ರಭಾಕರ್ ಅವರನ್ನು ಮದುವೆಯಾಗುವ ನಿರ್ಧಾರದ ಹಿಂದಿನ ಕಾರಣವನ್ನು ಫರ್ಹೀನ್ ಒಮ್ಮೆ ಸಂದರ್ಶನದಲ್ಲೂ ಬಹಿರಂಗಪಡಿಸಿದ್ದರು. ಚಿಕ್ಕವಯಸ್ಸಿನಲ್ಲಿ ತಾನು ಹಿಂದೂವನ್ನು ಮದುವೆಯಾಗುತ್ತೇನೆ ಎಂದು ನಿರ್ಧರಿಸಿದ್ದೆ ಏಕೆಂದರೆ ತನಗೆ ಮುಸ್ಲಿಂ ಪುರುಷರಲ್ಲಿ ನಂಬಿಕೆ ಇರಲಿಲ್ಲ ಎಂದಿದ್ದರು. ಫರ್ಹೀನ್ ತಂದೆ ಮೂರು ಮದುವೆಯಾಗಿದ್ದರು. ಇದು ಅವರ ಜೀವನದಲ್ಲಿ ಬಹಳ ಪ್ರಭಾವ ಬೀರಿತ್ತು ಎಂದು ಸಂದರ್ಶನದಲ್ಲಿ ಹೇಳಿದ್ದರು.
ಇನ್ನು ಕನ್ನಡದಲ್ಲಿ ಕೂಡ ಫರ್ಹೀನ್ ಅವರು ನಟನೆ ಮಾಡಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ರವಿಚಂದ್ರನ್ ಜೊತೆಗೆ ನಟಿಸುವ ಮೂಲಕ ಗಮನ ಸೆಳೆದಿದ್ದ ಫರ್ಹೀನ್ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಫರ್ಹೀನ್ಗೆ ಈಗ 51 ವರ್ಷಗಳಾಗಿದ್ದು, ಫರ್ಹೀನ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು ಮತ್ತು ಹಿಂದೂ ಆಗಿರುವ, ಮಾಜಿ ಭಾರತೀಯ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ವಿವಾಹವಾದರು ಮತ್ತು ಅವರ ಇಬ್ಬರು ಮಕ್ಕಳಾದ ರಾಹಿಲ್ ಮತ್ತು ಮನವಂಶ್ ಮತ್ತು ಮಾವನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.