“ಕರಿಮಣಿ ಮಾಲಿಕ ನೀ ನಲ್ಲ” ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ವಿಕ್ಕಿಪೀಡಿಯ ಹಾಡು
1999 ರಲ್ಲಿ ತೆರೆಕಂಡ ಉಪೇಂದ್ರ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಸಾಹಿತ್ಯದಲ್ಲಿ ಮೂಡಿ ಬಂದ “ಕರಿಮಣಿ ಮಾಲಿಕ ನೀ ನಲ್ಲ” (Karimani Maalika Nee Nalla) ಗೀತೆಯು 2024 ರಲ್ಲಿ ಇಂಟರನೆಟ್, ಇನ್ಸ್ಟಾಗ್ರಾಮ್, ಫೇಸಬುಕ್, ಯೂಟ್ಯೂಬ್ ಹಾಗೂ ಇನ್ನಿತರೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತ ವೈರಲ್ ಆಗಿದೆ.
ಕರಿಮಣಿ ಮಾಲಿಕ ನೀ ನಲ್ಲ (Karimani Maalika Nee Nalla) ಹಾಡಿನ ಹಿನ್ನೆಲೆ:
ಉಪೇಂದ್ರ ಚಿತ್ರದ ಚಿತ್ರೀಕರಣದ ಸಮಯದಲ್ಲಾಗಲೇ ಚಿತ್ರ ನಟಿ ಪ್ರೇಮಾ ಮತ್ತು ಉಪೇಂದ್ರ ನಡುವೆ ಏನೋ ನಡಿಯುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದು, ಈ ವದಂತಿಯನ್ನು ಸುಳ್ಳಾಗಿಸಲು ಕರಿಮಣಿ ಮಾಲಿಕ ನೀನಲ್ಲ (Karimani Maalika Nee Nalla) “ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೇ ಏನಿಲ್ಲ” ಹಾಡನ್ನು ರಚಿಸಲಾಗಿದೆ ಎಂದು ಹೇಳಲಾಗುತ್ತದೆ. ಮಂಗಳೂರಿನಲ್ಲಿ ಈ ಸುಂದರ ಹಾಡಿನ ಸಾಹಿತ್ಯವನ್ನು ರಚಿಸಲು ಉಪೇಂದ್ರ ಒಂದು ವಾರಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದರಂತೆ. ಅದೇನೇ ಇರಲಿ “ಮನಸಿನೊಳಗೆ ಖಾಲಿ, ಖಾಲಿ, ನೀ ಮನದೊಳಗೇ ಇದ್ದರೂ ಮಲ್ಲಿಗೆ ಸಂಪಿಗೆ ತರದೆ ಹೋದರೂ ನೀ ನನಗೆ, ಓನಲ್ಲ ನೀ ನಲ್ಲ, ಕರಿಮಣಿ ಮಾಲಿಕ ನೀ ನಲ್ಲ” ಎಂಬ ಸಾಲುಗಳು ಎಂತಹ ಬರಡು ಹೃದಯದಲ್ಲೂ ಒಮ್ಮೆ ಪ್ರೀತಿಯ ಸಿಂಚನವನ್ನು ಉಣಬಡಿಸಿಯೇ ತೀರುವಂತಹ ಸಾಲುಗಳು ಎಂದರೆ ತಪ್ಪಾಗಲಾರದು.
View this post on Instagram
ಟ್ರೆಂಡ್ ನಲ್ಲಿದೆ ಕರಿಮಣಿ ಮಾಲಿಕ ನೀ ನಲ್ಲ (Karimani Maalika Nee Nalla):
ತನ್ನ ವಿಶೇಷ ಮ್ಯಾನರಿಸಮ್ ಹಾಗೂ ಅತ್ಯದ್ಭುತ ಸಾಹಿತ್ಯದ ಸಾಲುಗಳಿಂದ ಕಂಗೊಳಿಸುವ ‘ಕರಿಮಣಿ ಮಾಲಿಕ ನೀನಲ್ಲ” (Karimani Maalika Nee Nalla) ಗೀತೆಯು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹಾಡುಗಳಲ್ಲಿ ಒಂದಾಗಿದ್ದು, ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದ ಶ್ರೇಷ್ಠವಾದ ಗೀತೆ ಎನ್ನಬಹುದು. ಇನ್ನು 1999 ರಲ್ಲಿ ಬಿಡುಗಡೆಯಾದ ಈ ಸುಂದರ ಗೀತೆಯನ್ನು ಕನ್ನಡ ಜನಮಾನಸಕ್ಕೆ ತಮ್ಮ ಸುಮಧುರ ಕಂಠದಿಂದ ಹಾಡಿದ ಪ್ರತಿಮಾ ರಾವ್ ಅವರಿಗೆ ಸಲ್ಲುತ್ತದೆ.
ತೀರ ಇತ್ತೀಚೆಗೆ ಈ “ಕರಿಮಣಿ ಮಾಲೀಕ ನೀನಲ್ಲ” (Karimani Maalika Nee Nalla) ಹಾಡಿಗೆ ಉತ್ತರ ಕರ್ನಾಟಕದ ವಿಜಯನಗರ ಜಿಲ್ಲೆಯ ಕನಕ ಎಂಬ ಹುಡುಗನು “ಹೋಗೋವಾಗ ಒಂದೇ ಒಂದು ಮಾತು ಹೇಳಿದ್ಳು ಮಗಾ..!
ಏನಂತಲೇ??
ಕರಿಮಣಿ ಮಾಲೀಕ ನೀ ನಲ್ಲ” ಎಂದು ಮಾಡಿದ ವೀಡಿಯೋ ಸಖತ್ ಸುದ್ದಿಯಲ್ಲಿತ್ತು. ಅದನ್ನು ನೀವೆಲ್ಲರೂ ಕೇಳಿದ್ದೀರಿ.
ಅಲ್ಲಿಂದ ಶುರುವಾದ ಇಂಟರನೆಟ್ ಸೆನ್ಷೇಷನ್ ಮುಂದುವರೆದು, ಇಂದು ಇಂಟರ್ ನೆಟ್ ಒನ್ಸ್ಟಾಗ್ರಾಂ, ಯೂಟ್ಯೂಬ್ ನಲ್ಲಿ ತಮ್ಮದೇ ಆದ ವಿಶೇಷ ಕಾಮಿಡಿ ಸ್ಕಿಟ್ ಗಳ ಮೂಲಕ ಜನತೆಗೆ ಮನರಂಜನೆ ನೀಡುತ್ತಿರುವ ವಿಕ್ಕಿಪೀಡಿಯಾ ಹೆಸರಿನ ವಿಕಾಸ್ ಈಗಾಗಲೇ ಕರ್ನಾಟಕದಲ್ಲಿ “ನಾನು ನಂದಿನಿ, ಬೆಂಗಳೂರಿಗಿ ಬಂದೀನಿ” ಹಾಡಿನ ಮೂಲಕ ಸಖತ್ ಸುದ್ದಿಯಲ್ಲಿದ್ದರು.
ಇದೀಗ ವಿಕ್ಕಿಪೀಡಿಯಾ ತಮ್ಮದೇ ವಿಶೇಷ ಮ್ಯಾನರಿಸಮ್ ನೊಂದಿಗೆ ಮತ್ತೊಮ್ಮೆ ಟ್ರೆಂಡ್ ಸೆಟ್ ಮಾಡಿದ್ದು, “ಕರಿಮಣಿ ಮಾಲಿಕ ನೀ ನಲ್ಲ ಬದಲಿಗೆ ಕರಿಮಣಿ ಮಾಲಿಕ ರಾವುಲ್ಲ” (Karimani Maalika Ravulla) ಎಂಬ ಗೀತೆಯನ್ನು ರಚಿಸಿ ಸಖತ್ ಸುದ್ದಿಯಲ್ಲಿದ್ದಾರೆ.
ಕರಿಮಣಿ ಮಾಲಿಕ ಭಾರತತೀಯ ಜನರ ಭಾವುಕತೆಯನ್ನು ಸೆರೆಹಿಡಿಯಬಲ್ಲ ಗೀತೆಯಾಗಿದ್ದು, ಕರಿಮಣಿ ಅಂದರೆ ತಾಳಿ (ಮಂಗಳ ಸೂತ್ರ) ದ ಕುರಿತು ಅತ್ಯಂತ ಸೂಕ್ಷ್ಮ ಸಂವೇದನೆಯಾಗಿ ಹೊರಹೊಮ್ಮಿದೆ. ಇಂದು ಕರಿಮಣಿ ಮಾಲಿಕ ನೀ ನಲ್ಲ (Karimani Maalika Nee Nalla) ಗೀತೆಯು ಪ್ರಪಂಚದಾದ್ಯಂತ ಇರುವ ಎಲ್ಲ ಕನ್ನಡಿಗರ ಹೃದಯ ಮತ್ತು ಕಲ್ಪನೆಗಳನ್ನು ಸೆರೆಹಿಡಿದಿದೆ. ದೇಶ, ವಿದೇಶ ಎಂದು ಭೇದ ಭಾವ ಮಾಡದೇ ಸಾಂಸ್ಕೃತಿಕ ಗಡಿಗಳನ್ನು ಮೀರಿದ ಸುಮಧುರವಾದ “ಕರಿಮಣಿ ಮಾಲಿಕ ನೀ ನಲ್ಲ” (Karimani Maalika Nee Nalla) ಹಾಡು ಇತ್ತೀಚೆಗೆ ಸಖತ್ ವೈರಲ್ ಆಗಿದ್ದು Instagram, YouTube, Twitter ಮತ್ತು Facebook ನಂತಹ ವೇದಿಕೆಗಳಲ್ಲಿ ಅದರ ಅದಮ್ಯ ಲಯದೊಂದಿಗೆ ವ್ಯಾಪಿಸಿದೆ.
ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಮತ್ತು ಅವರ ಸಹಾಯಕ ರಾಹುಲ್ ನ ಜುಗಲ್ ಬಂದಿ”:
ಕರಿಮಣಿ ಮಾಲಿಕ ರಾವುಲ್ಲಾ (Karimani Maalika Ravulla) ಎಂದು ವಿಕ್ಕಿಪೀಡಿಯಾ ದಲ್ಲಿ ವೈರಲ್ ಆಗಿರುವ ಈ ರಾವುಲ್ಲ ಯಾರು ಗೊತ್ತೇ? ಈಗಾಗಲೇ Instagram, YouTube, Twitter ಮತ್ತು Facebook ನಂತಹ ವೇದಿಕೆಗಳಲ್ಲಿ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ವಿಶೇಷವಾಗಿ ಬ್ಯಾಚಲರ್ ಗಳು ಸೇರಿದಂತೆ ಎಲ್ಲರೂ ಸುಲಭಾಗಿ ಮಾಡಿಕೊಳ್ಳಬಹುದಾದ ಸರಳ ಅಡುಗೆಗಳಿಗೆ ಫೇಮಸ್ ಆಗಿರುವ ಚಂದ್ರು ಅವರ ಸಹಾಯಕ ರಾಹುಲ್ ತಮ್ಮ ಅಡುಗೆ ವೀಡಿಯೋಗಳಲ್ಲಿ ಬಳಸುವ ಗ್ರಾಮ್ಯ ಪದಗಳನ್ನು ಬಳಸಿಕೊಂಡು ಈ “ಕರಿಮಣಿ ಮಾಲಿಕ ರಾವುಲ್ಲ” ಗೀತೆಯನ್ನು ಮಾಶ್ ಅಪ್ ಮಾಡಲಾಗಿದೆ.
ಈಗಾಗಲೇ ಇಂಟರನೆಟ್ ನಲ್ಲಿ ಚಂದ್ರು ಅವರು ಟ್ರೆಂಡ್‌ಸೆಟರ್ ಎಂದು ಗುರುತಿಸಿಕೊಂಡಿದ್ದು, ಅವರ ಸಹಾಯಕ ರಾಹುಲ್ ಅವರೊಂದಿಗೆ ಕಳೆಯುವ ಹಾಸ್ಯಮಯ ಸಂವಾದಗಳನ್ನು ಬಳಸಿಕೊಂಡು ಈ ಲೆಜೆಂಡರಿ “ಕರಿಮಣಿ ಮಾಲಿಕ ನೀ ನಲ್ಲ” (Karimani Maalika Nee Nalla) ಎಂಬ ಸಾಂದರ್ಭಿಕ ಗ್ರಾಮ್ಯ ಉಲ್ಲೇಖಗಳಿರುವ ಅದ್ಭುತ ಗೀತೆಯನ್ನು ರಚಿಸಲಾಗಿದೆ.
ರಾಮಮಂದಿರ ಉದ್ಘಾಟನೆ, ಲೋಕಸಭಾ ಚುನಾವಣೆ ಮತ್ತು ಇನ್ನಿತರೇ ವಿಶೇಷ ಘೋಷಣೆಗಳ ನಿರೀಕ್ಷೆಯಂತಹ ಮಹತ್ವದ ಘಟನೆಗಳ ಸುತ್ತ ಚರ್ಚೆಗಳು ನಡೆಯುತ್ತಿರುವಾಗಲೂ, “ಕರಿಮಣಿ ಮಾಲಿಕ ನೀ ನಲ್ಲ” (Karimani Maalika Nee Nalla) ಎಂಬ ಹಾಡು ಪ್ರತಿಯೊಬ್ಬರ ಫೋನ್ ಗಳಲ್ಲೂ ದಿನಕ್ಕೆ ಕನಿಷ್ಟ 100 ಬಾರಿಯಾದರೂ ರೀಲ್ಸ್ ಗಳ ರೀತಿಯಲ್ಲಿ ಬಂದು ಹೋಗಿಯೇ ಇರುತ್ತದೆ. ತನ್ನ ವಿಶೇಷ ಸಂಯೋಜನೆಯಿಂದ ವಿಶೇಷ ಡ್ಯಾನ್ಸ್, ವಿಶೇಷ ಡೈಲಾಗ್ಸ್ ಗಳಿಂದ ಪ್ರೇಕ್ಷಕರನ್ನು ತನ್ನತ್ತ ಮೋಡಿ ಮಾಡಿ ಸೆಳೆಯುತ್ತಲೇ ಇದೆ.
ಟ್ರೆಂಡ್ ಆಗಿರುವ Karimani Maalika Nee Nalla ವೀಡಿಯೋದಲ್ಲಿನ ಡೈಲಾಗ್ಸ್ ಗಳು ಹೀಗಿವೆ:
ಅಮಿತ್ ಚಿಟ್ಟೆ: “ನಿಂಗೆ ಫ್ಲವರ್ಸ್ ಅಂದ್ರೆ ಅಲರ್ಜಿ ಅಂತ ಮಲ್ಲಿಗೇನೂ ತಗೊಂಡು ಬಂದಿಲ್ಲ, ಸಂಪಿಗೇನೂ ತಗೊಂಡು ಬಂದಿಲ್ಲ. ಫ್ರೂಟ್ಸ್ ತಗೊಂಡು ಬಂದಿದೀನಿ. (ಮಲ್ಲಿಗೆ ಸಂಪಿಗೆ ತರದೇ ಹೋದರು ನೀ ನನಗೆ, ಓ ನಲ್ಲ ನೀನಲ್ಲ ಕರಿಮಣಿ ಮಾಲಿಕ ನೀ ನಲ್ಲ ಎಂಬ ಸಾಲುಗಳಿಗೆ ಅನುಗುಣವಾಗಿ ಬಳಸಲಾಗಿದೆ) ಆದರೆ ಅವನು ! ನೀನು ವೆಜಿಟೇರಿಯನ್ ಅಂತ ಗೊತ್ತಿದ್ದರೂ ಕಬಾಬ್ (ಚಂದ್ರು ಅವರ ಫೇಮಸ್ ರೆಸಿಪಿ ಬೆಳ್ಳುಳ್ಳಿ ಕಬಾಬ್ ಕುರಿತು ತಿಳಿಸಲಾಗಿದೆ) ತಗೊಂಡು ಬಂದಿದಾನೆ. ಇವಾಗ ಹೇಳು ಈ ಕರಿಮಣಿ ಮಾಲಿಕ ಯಾರು?
ವಿಕ್ಕಿಪೀಡಿಯಾ: “ಒಂದು ಸಾಂಗ್ ಮುಖಾಂತರ ಹೇಳ್ಲಾ?”
ಅಮಿತ್ ಚಿಟ್ಟೆ: “ಇದೇನು ಎದೆ ತುಂಬು ಹಾಡುವೆನು ನಾ?”
ವಿಕ್ಕಿಪೀಡಿಯಾ: “ಪ್ಲೀಸ್”
ಅಮಿತ್ ಚಿಟ್ಟೆ: “ಓಕೆ”
ವಿಕ್ಕಿಪೀಡಿಯಾ: “ಮನಸಿನೊಳಗೆ ಖಾಲಿ ಖಾಲಿ ! ನೀ ಮನದೊಳಗೆ ಇದ್ದರೂ ! ಮಲ್ಲಿಗೆ, ಸಂಪಿಗೆ ತರದೆ ಹೋದರೂ ನೀ ನನಗೆ ! ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ”
ಅಮಿತ್ ಚಿಟ್ಟೆ: “ಮತ್ಯಾರು”
ವಿಕ್ಕಿಪೀಡಿಯಾ: “ಕರಿಮಣಿ ಮಾಲೀಕ ರಾವುಲ್ಲ”
ಕೋರಸ್: “ರಾವುಲ್ಲ ರಾವುಲ್ಲ, ಕರಿಮಣಿ ಮಾಲೀಕ ರಾವುಲ್ಲ”, “ರಾವುಲ್ಲ ರಾವುಲ್ಲ, ಕರಿಮಣಿ ಮಾಲೀಕ ರಾವುಲ್ಲ”, “ರಾವುಲ್ಲ ರಾವುಲ್ಲ, ಕರಿಮಣಿ ಮಾಲೀಕ ರಾವುಲ್ಲ”
ಚಂದ್ರು: ಒನ್ ಮೋರ್ ಒನ್ ಮೋರ್ ಅನ್ಬೇಕು ನೀವು…!
Click Here To See Vickypedia Karimani Maalika Ravulla YouTube Shorts
Click Here to See Vickypedia Karimani Maalika Ravulla Instagram Reels
ಸದ್ಯ ಕರಿಮಣಿ ಮಾಲಿಕ ನೀನಲ್ಲ (Karimani Maalika Nee Nalla) ಹಾಡು 1999 ರಲ್ಲಿ ಬಿಡುಗಡೆಯಾಗಿದ್ದರೂ ಈ ರೀತಿಯ ಸಖತ್ ಟ್ರೆಂಡ್ ಸೃಷ್ಟಿಸುವಲ್ಲಿ ಅದರ ರಚನೆಕಾರ ಉಪೇಂದ್ರ ಅವರ ಸಾಹಿತ್ಯ ಸ್ಪರ್ಷ, ಗುರುಕಿರಣ್ ಅವರ ಅದ್ಭುತ ಸಂಗೀತ ಸಂಯೋಜನೆ ಹಾಗೂ ಪ್ರತಿಮಾ ರಾವ್ ಅವರ ಸುಮಧುರ ಗಾಯನವೇ ಈ ಹಾಡಿನ ಮೂಲ ಟ್ರೆಂಡ್ ಎಂದರೂ ಈ ಹಾಡನ್ನು ಇಷ್ಟೊಂದು ಜನಪ್ರಿಯವಾಗಿಸುವಲ್ಲಿ ಇನ್ಸ್ಟಾಗ್ರಾಮ್ ನ ಈ ಟ್ರೆಂಡ್ ಸೆಟ್ಟರ್ ಪ್ರತಿಭೆಗಳನ್ನು ಮರೆಯುವಂತಿಲ್ಲ.