ಧ್ರುವ ಸರ್ಜಾ ಪ್ಯಾನ್ ಇಂಡಿಯಾ ‘ಮಾರ್ಟಿನ್’ ಬಿಡುಗಡೆ ದಿನಾಂಕ ಘೋಷಣೆ!
ಬೆಂಗಳೂರು: ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ಅಭಿನಯದ ಬಹುನಿರೀಕ್ಷಿತ ‘ಮಾರ್ಟಿನ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಚಿತ್ರತಂಡದ ಪ್ರಕಾರ, ಈ ವರ್ಷ ಅಕ್ಟೋಬರ್ 11ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಮಾರ್ಟಿನ್’ ತೆರೆಗೆ ಬರಲಿದೆ. ಈ ಮಹತ್ವದ ಘೋಷಣೆಯನ್ನು ಶುಕ್ರವಾರ ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಬಹಿರಂಗಪಡಿಸಿತು.
ಧ್ರುವ ಸರ್ಜಾ ಪ್ಯಾನ್ ಇಂಡಿಯಾ ‘ಮಾರ್ಟಿನ್’ ಬಿಡುಗಡೆ ದಿನಾಂಕ ಘೋಷಣೆ!
‘ಮಾರ್ಟಿನ್’ ಚಿತ್ರವು ಬಹುಕೋಟಿ ಬಜೆಟ್ನೊಂದಿಗೆ ಮಾಡಲ್ಪಟ್ಟಿದ್ದು, ಸುಮಾರು 240 ದಿನಗಳ ಚಿತ್ರೀಕರಣದಲ್ಲಿ ಪೂರ್ಣಗೊಂಡಿದೆ. ನಿರ್ದೇಶಕ ಎ.ಪಿ. ಅರ್ಜುನ್ ಅವರ ನಿರ್ದೇಶನದಲ್ಲಿ ವಿಶೇಷವಾಗಿ ಮೂಡಿ ಬಂದ ಈ ಚಿತ್ರದಲ್ಲಿ ಆ್ಯಕ್ಷನ್ ಮಾಸ್ಟರ್ಗಳು ರವಿ ವರ್ಮಾ ಮತ್ತು ರಾಮ್-ಲಕ್ಷ್ಮಣ ಅವರ ಆ್ಯಕ್ಷನ್ ದೃಶ್ಯಗಳು ಅಪರೂಪದಂದಿರುತ್ತದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಮತ್ತಷ್ಟು ಕಳೆ ಕಟ್ಟಿ ಕೊಟ್ಟಿದೆ.
Dhruva Sarja Martin Film
ಈ ಚಿತ್ರದಲ್ಲಿರುವ ಆ್ಯಕ್ಷನ್ ದೃಶ್ಯಗಳು ತುಂಬಾನೆ ಥ್ರಿಲ್ಲಿಂಗ್ ಆಗಿದ್ದು, ಈಗಾಗಲೇ ಬಿಡುಗಡೆಯಾದ ಟೀಸರ್ ನಲ್ಲಿ ಇದು ಸ್ಪಷ್ಟವಾಗಿದೆ. ಇಡೀ ಸಿನಿಮಾದಲ್ಲಿ ಇನ್ನೂ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಧ್ರುವ ಸರ್ಜಾ ಪ್ಯಾನ್ ಇಂಡಿಯಾ ‘ಮಾರ್ಟಿನ್’ ಬಿಡುಗಡೆ ದಿನಾಂಕ ಘೋಷಣೆ!
‘ಮಾರ್ಟಿನ್’ ಚಿತ್ರದ ಕಥೆಯನ್ನು ಅರ್ಜುನ್ ಸರ್ಜಾ ಬರೆದಿದ್ದು, ಅದನ್ನು ನಿರ್ದೇಶಕ ಎ.ಪಿ. ಅರ್ಜುನ್ ಅತ್ಯಂತ ಮನೋಜ್ಞವಾಗಿ ತೆರೆಗೆ ತಂದಿದ್ದಾರೆ. ಈ ಮೂಲಕ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಇಡೀ ಕಥೆ ಆ್ಯಕ್ಷನ್ ಪೂರಿತ ದೃಶ್ಯಗಳೊಂದಿಗೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ‘ಪೊಗರು’ ಚಿತ್ರದ ನಂತರ 3 ವರ್ಷಗಳ ಬಳಿಕ ಬೆಳ್ಳಿತೆರೆ ಮೇಲೆ ಧ್ರುವ ಸರ್ಜಾ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ.
‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಪ್ರೇಮಿಗಳು ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಇವುಗಳನ್ನೂ ಓದಿ:
-
- ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಪರಿಮಳ ಈಗ ಹೇಗಿದ್ದಾರೆ ಗೊತ್ತಾ?
- ಜೂನಿಯರ್ ಎನ್ಟಿಆರ್ ವಾಚ್ ಬೆಲೆ ಕೇಳಿದ್ರೆ ದಂಗಾಗ್ತೀರಿ! ವಾಚ್ ಬೆಲೆ ಇಷ್ಟೊಂದಾ..!!
- ದ್ವಿತೀಯ ಪಿಯುಸಿ ಮರು ಎಣಿಕೆ & ಮೌಲ್ಯಮಾಪನಕ್ಕೆ ಈಗಲೇ ಅರ್ಜಿ ಸಲ್ಲಿಸಿ: ಸಂಪೂರ್ಣ ಮಾಹಿತಿ ಇಲ್ಲಿದೆ
- ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವೈರಲ್ ಮಾತುಗಳು
- 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
- ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ