10ನೇ ತರಗತಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ 4ಸಾವಿರ ಉದ್ಯೋಗ 85 ಸಾವಿರ ಸಂಬಳ
ಹಾಯ್ ಸ್ನೇಹಿತರೇ, ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರಾ? ಹಾಗಾದರೆ ನಿಮಗಿದೆ ಇಲ್ಲಿ ಶುಭಸುದ್ದಿ. ಆತ್ಮೀಯರೇ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿಯೇ ಬಹುತೇಕ ಎಲ್ಲರೂ ಕಷ್ಟಪಟ್ಟು ಓದುತ್ತಾರೆ. ಈ ಪ್ರಕ್ರಿಯೆಯಲ್ಲಿ, ಕೆಲವರು ಗುರಿಯನ್ನು ತಲುಪುತ್ತಾರೆ. ಇತರರು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂತಹವರಿಗೆ ಭಾರತೀಯ ನೌಕಾಪಡೆ ಸಿಹಿಸುದ್ದಿ ನೀಡಿದೆ. ಭಾರತೀಯ ಮರ್ಚೆಂಟ್ ನೇವಿಯು ಸುಮಾರು 4000 ಸಂಖ್ಯೆಯ ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿ. ಅಧಿಸೂಚನೆ ಬಿಡುಗಡೆ ಮಾಡಿದೆ. ಆಯ್ಕೆಯಾದವರಿಗೆ ಪ್ರತಿ ತಿಂಗಳು ಸಿಗಲಿದೆ ಆರಂಭಿಕ 40 ಸಾವಿರ ರೂ. ವೇತನ. ಹಾಗಾದರೆ ಇನ್ನೇಕೆ ತಡ ಈಗಲೇ ಈ ಕುರಿತಾದ ಈ ಕೆಳಗಿನ ಪೂರ್ತಿ ವಿವರಣೆಯನ್ನು ಓದಿರಿ ಮತ್ತು ಸಂಪೂರ್ಣವಾಗಿ ವಿಷಯವನ್ನು ತಿಳಿದು ಈಗಲೇ ಅರ್ಜಿ ಸಲ್ಲಿಸಿ.
ಭಾರತೀಯ ನೌಕಾಪಡೆ ಉದ್ಯೋಗ:
ಭಾರತೀಯ ನೌಕಾಪಡೆಯು ವಿವಿಧ ವಿಭಾಗಗಳಲ್ಲಿ ಖಾಲಿಯಿರುವ 4000 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು,ಸ ದರಿ ಹುದ್ದೆಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಪೋಸ್ಟ್ಗಳ ವಿವರಗಳಿಗೆ ಸಂಬಂಧಿಸಿದಂತೆ. ಸಂಪೂರ್ಣ ವಿವರಗಳಿಗಾಗಿ ತಾವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಭಾರತೀಯ ನೌಕಾಪಡೆ ಉದ್ಯೋಗ: ಹುದ್ದೆಗಳ ಮಾಹಿತಿ ಹೀಗಿದೆ.
ಹುದ್ದೆಯ ವಿವರ | ಹುದ್ದೆಗಳ ಸಂಖ್ಯೆ |
---|---|
ಡೆಕ್ | 721 |
ಇಂಜಿನ್ | 236 |
ಸೀಮನ್ | 1432 |
ಎಲೆಕ್ಟ್ರಿಷಿಯನ್ | 408 |
ವೆಲ್ಡರ್/ಹೆಲ್ಪರ್ | 78 |
ಮೆಸ್ ಬಾಯ್ | 922 |
ಕುಕ್ | 203 |
Total | 4000 |
ಸದರಿ ಮೇಲ್ಕಂಡ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾರತೀಯ ನೌಕಾಪಡೆ ಉದ್ಯೋಗ: ವಿದ್ಯಾರ್ಹತೆಯ ಮಾಹಿತಿ
ಹುದ್ದೆಗಳಿಗೆ ಅನುಗುಣವಾಗಿ 10/12ನೇ ತರಗತಿ ಉತ್ತೀರ್ಣರಾದವರು ಅರ್ಹರು. ಅಲ್ಲದೆ ವಯಸ್ಸು 17.5 ವರ್ಷದಿಂದ 27 ವರ್ಷ ಮೀರಬಾರದು. ಕೆಲವು ಹುದ್ದೆಗಳಿಗೆ 25 ವರ್ಷಕ್ಕಿಂತ ಹೆಚ್ಚಿಲ್ಲ.
ಭಾರತೀಯ ನೌಕಾಪಡೆ ಉದ್ಯೋಗ: ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಸದರಿ ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 30 ಏಪ್ರಿಲ್ 2024 ಕೊನೆಯ ದಿನಾಂಕವಾಗಿದ್ದು, ನಿಗದಿತ ದಿನಾಂಕದ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅಡುಗೆಯವರ ಹುದ್ದಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ 10ನೇ ತರಗತಿಯನ್ನು ತೇರ್ಗಡೆಯಾಗಿರಬೇಕು ಮತ್ತು 17.5 ರಿಂದ 27 ವರ್ಷದೊಳಗೆ ಇರಬೇಕು. ಅಂಥವರು ಮಾತ್ರ ಹುದ್ದೆಗೆ ಅರ್ಜಿಸಲ್ಲಿಸಲು ಅರ್ಹತೆಯನ್ನು ಪಡೆದಿದ್ದಾರೆ.. ಅದೇ ರೀತಿ ಮೆಸ್ ಹುಡುಗರ ಹುದ್ದೆಗೂ ಕೂಡ ಅಡುಗೆ ವಿಭಾಗದ ಅರ್ಹತೆಗಳನ್ನು ಹೊಂದಿರಬೇಕು.
ಇನ್ನು ವೆಲ್ಡರ್/ಸಹಾಯಕ ವರ್ಗಕ್ಕೆ, ITI ಉತ್ತೀರ್ಣರಾಗಿರು ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಇವರೂ ಕೂಡ 17.5 ರಿಂದ 27 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಡೆಸ್ಕ್ ರೇಟಿಂಗ್ ಹುದ್ದೆಗೆ ಅರ್ಜಿಸಲ್ಲಿಸ ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 17.5 ರಿಂದ 25 ವರ್ಷಗಳ ಒಳಗಿನ ವಯೋಮಿತಿಯನ್ನು ಹೊಂದಿರಬೇಕು.
ಭಾರತೀಯ ನೌಕಾಪಡೆ ಉದ್ಯೋಗ: ಅರ್ಜಿ ಶುಲ್ಕದ ವಿವರ
ಅರ್ಜಿ ಶುಲ್ಕ100 ರೂ. ಪಾವತಿಸಬೇಕು. ಪರೀಕ್ಷೆಯು 100 ಅಂಕಗಳನ್ನು ಹೊಂದಿರುತ್ತದೆ.
ಭಾರತೀಯ ನೌಕಾಪಡೆ ಉದ್ಯೋಗ: ಅಗತ್ಯ ದಾಖಲೆಗಳ ಮಾಹಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶಿಕ್ಷಣ ಪ್ರಮಾಣಪತ್ರಗಳು, ಪಾಸ್ಪೋರ್ಟ್, ಜನನ ಪ್ರಮಾಣಪತ್ರ, ವೈದ್ಯಕೀಯ ಪ್ರಮಾಣಪತ್ರಗಳು, ಗುಣನಡತೆಯ ಪ್ರಮಾಣಪತ್ರ, ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ಇತರ ಪ್ರಮಾಣಪತ್ರಗಳು ಕಡ್ಡಾಯವಾಗಿದೆ. ಸದರಿ ಹುದ್ದೆಗಳಿಗೆ ಅಧಿಸೂಚಿಸಿದ ನೇಮಕಾತಿ ಅಧಿಸೂಚನೆಯು ಭಾರತೀಯ ಮರ್ಚಂಟ್ ನೇವಿ ವಿಭಾಗಕ್ಕೆ ಸೇರಿರುವ ಹುದ್ದೆಗಳಾಗಿರುವುದರಿಂದ ಇವುಗಳಲ್ಲಿ ಕೆಲಸ ನಿರ್ವಹಿಸುವ ಅಭ್ಯರ್ಥಿಗಳು ಆಮದು ಮತ್ತು ರಫ್ತು ವಿಭಾಗಗಳಿಗೆ ಸಂಬಂಧಿಸಿದಂತೆ ಕನಿಷ್ಠ ವ್ಯವಹಾರ ಜ್ಞಾನವನ್ನು ಹೊಂದಿರವಬೇಕೆಂದು ಬಯಸುತ್ತದೆ. ಇವುಗಳ ಜೊತೆಗೆ ಈ ಉದ್ಯೋಗಗಳಿಗೆ ಅಗತ್ಯವಿರುವ ನಿಗದಿತ ಪರೀಕ್ಷೆಯ ಜೊತೆಗೆ ಕೆಲವು ಅರ್ಹತೆಗಳನ್ನು ಹೊಂದಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹೆಚ್ಚಿನ ವಿವರಗಳಿಗಾಗಿ ಮರ್ಚಂಟ್ ನೇವಿಯ ಅಧಿಕೃತ ವೆಬ್ಸೈಟ್ https://indianmerchantnavy.org/ ಗೆ ಭೇಟಿ ಮಾಡಬಹುದು.
ಇವುಗಳನ್ನೂ ಓದಿ:
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ
- Bajaj Pulsar NS200 New Model 2024: ಬೆಲೆ, ಬಿಡುಗಡೆ ದಿನಾಂಕ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ
- “ಕರಿಮಣಿ ಮಾಲಿಕ ನೀ ನಲ್ಲ” ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ವಿಕ್ಕಿಪೀಡಿಯ ಹಾಡು