ಮಡಿಕೆ ನೀರಿಗೆ ಸರ್ವ ರೋಗವನ್ನೂ ನೀಗಿಸುವ ತಾಕತ್ತಿದೆ
ಮಡಿಕೆ ನೀರು: ಬಿರು ಬಿಸಿಲಿನ ಈ ಬೇಸಿಗೆ ಕಾಲಕ್ಕೆ ತಂಪಾದ ನೀರು ಕುಡಿದಾಗ ಸಿಗುವ ಆನಂದವೇ ಬೇರೆ. ಹಾಗಂತ ಪ್ರಿಡ್ಜ್ ನಲ್ಲಿ ಕೃತಕವಾಗಿ ತಂಪು ಮಾಡಿದ ನೀರು ಮತ್ತಿತರೆ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಹೌದು..!! ಆದ್ದರಿಂದ ಇಂತಹ ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸಿ, ಆರೋಗ್ಯಕರವಾದ ಪ್ರಾಚೀನ ಕಾಲದ ಜನರು ಬಳಸುತ್ತಿದ್ದ ಮಣ್ಣಿನ ಮಡಿಕೆಯ ನೀರಿಗೆ ಹಾಗೂ ಮಣ್ಣಿನ ಮಡಿಕೆಗೆ ಬಹಳಷ್ಟು ಬೇಡಿಕೆ ಬಂದಿದೆ.
ಮಡಿಕೆ ನೀರಿನ ಪ್ರಯೋಜನಗಳು:
ಆತ್ನೀಯ ಸ್ನೇಹಿತರೇ, ಈಗ ಬೇಸಿಗೆ ಇರುವುದರಿಂದ ಹೆಚ್ಚು ನೀರು ಕುಡಿಯಬೇಕು. ದೇಹದಲ್ಲಿರುವ ನೀರು ಬೆವರಿನ ರೂಪದಲ್ಲಿ ಹೊರಹೋಗುತ್ತದೆ. ಇದರಿಂದಾಗಿ ನಿರ್ಜಲೀಕರಣವಾಗುವ ಸಾಧ್ಯತೆಗಳಿವೆ. ಆದರೆ ಅನೇಕರು ಬೇಸಿಗೆಯ ತಾಪದಿಂದ ಪಾರಾಗಲು ಫ್ರಿಡ್ಜ್ನಲ್ಲಿರುವ ನೀರನ್ನು ಕುಡಿಯುತ್ತಾರೆ. ಆದರೆ ಹೆಚ್ಚು ಫ್ರಿಡ್ಜ್ ನೀರನ್ನು ತೆಗೆದುಕೊಳ್ಳಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಮಡಿಕೆಯ ನೀರು ತಣ್ಣಗಿರುವುದು ಮಾತ್ರವಲ್ಲದೆ ಕುಡಿಯಲು ತುಂಬಾ ಸಿಹಿಯಾಗಿರುತ್ತದೆ. ಮಣ್ಣಿನ ಮಡಿಕೆ ನೈಸರ್ಗಿಕವಾಗಿ ನೀರನ್ನು ಹೊರಗಿನ ತಾಪಮಾನದಿಂದ ರಕ್ಷಿಸುವ ಮೂಲಕ ತಂಪಾಗಿಸುತ್ತದೆ.
ಮಡಿಕೆ ನೀರಿನಲ್ಲಿ ಯಾವುದೇ ರಾಸಾಯನಿಕಗಳಿಲ್ಲ:
ಮಡಿಕೆಯಲ್ಲಿರುವ ನೀರಿನಲ್ಲಿ ಯಾವುದೇ ರಾಸಾಯನಿಕಗಳಿಲ್ಲ. ನೀರಿನಲ್ಲಿ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಈ ನೀರಿನಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ಇರುವುದಿಲ್ಲ. ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ.
ಮಣ್ಣಿನ ಮಡಿಕೆಗಳಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಜೀವಸತ್ವಗಳು ಮತ್ತು ಖನಿಜಗಳು ಲಭ್ಯವಿದೆ. ಹಾಗಾಗಿ ಇವು ದೇಹಕ್ಕೆ ತುಂಬಾ ಒಳ್ಳೆಯದು.
ಮಣ್ಣಿನ ಮಡಿಕೆ ನೈಸರ್ಗಿಕವಾಗಿರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತುಂಬಾ ತಂಪಾಗಿರುತ್ತದೆ. ಅವು ಫ್ರಿಡ್ಜ್ನಲ್ಲಿರುವ ನೀರಿಗಿಂತ ಹೆಚ್ಚು ಆರೋಗ್ಯಕರವಾಗಿವೆ. ಫ್ರಿಡ್ಜ್ನಿಂದ ತಣ್ಣೀರು ಕುಡಿಯುವುದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ.