ಪ್ಯಾರೀಸ್ ಒಲಂಪಿಕ್ಸ್: ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯರಿಂದ 5 ಲಕ್ಷ ರೂ. ಮಂಜೂರು
ಬೆಂಗಳೂರು: ಪ್ಯಾರೀಸ್ ಒಲಂಪಿಕ್ಸ್ನಲ್ಲಿ ಭಾರತದ ಪ್ರತಿನಿಧಿಸುವ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂಪಾಯಿ ನೆರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹದಾಗಿ ತಲಾ 5 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಹಣವನ್ನು ಮಂಜೂರು ಮಾಡಿದ್ದಾರೆ.
ಜುಲೈ 26ರಿಂದ ಆಗಸ್ಟ್ 11ರವರೆಗೆ ಪ್ಯಾರೀಸ್ನಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟದಲ್ಲಿ ರಾಜ್ಯದ ಹಲವರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ನಲ್ಲಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಧಿನಿಧಿ ದೇಸಿಂಗ್, ಮಿಕ್ಸ್ಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ನಲ್ಲಿ ಅರ್ಚನಾ ಕಾಮತ್, ಪುರುಷರ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ನಲ್ಲಿ ನಿಶಾಂತ್ ದೇವ್, ಮಿಕ್ಸ್ಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಒಂಬತ್ತು ಕ್ರೀಡಾಪಟುಗಳಿಗೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ನಿಂದ ಪ್ರತ್ಯೇಕವಾಗಿ ಸಹಾಯ ಒದಗಿಸಲಾಗುವುದು ಎಂದು ಡಾ.ಕೆ.ಗೋವಿಂದರಾಜು ತಿಳಿಸಿದ್ದಾರೆ. ಕ್ರೀಡಾಪಟುಗಳಿಗೆ ಸರ್ಕಾರದ ನೆರವು ದೊರಕಿಸಿದ ಮುಖ್ಯಮಂತ್ರಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಇವುಗಳನ್ನೂ ಓದಿ:
-
- ಸೆಕ್ಸ್ಟಿಂಗ್: ಕಾಮಾಸಕ್ತಿಯ ನಿಯಂತ್ರಣ ಮತ್ತು ಜಾಗೃತಿ
- ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಇನ್ನಿಲ್ಲ, ಸಾವಿಗೆ ಇದೇ ಕಾರಣ!
- ಝೀಕಾ: ಮುನ್ನೆಚ್ಚರಿಕೆಯಾಗಿರಿ – ಆರೋಗ್ಯ ಇಲಾಖೆ ಸೂಚನೆ
- ಬಾಲರಾಜು ಮಾಸ್ತರ್: ವಿದ್ಯಾರ್ಥಿಗಳ ಕಣ್ಣೀರು ಹನಿ ವಿದಾಯ
- ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಪರಿಮಳ ಈಗ ಹೇಗಿದ್ದಾರೆ ಗೊತ್ತಾ?
- ಜೂನಿಯರ್ ಎನ್ಟಿಆರ್ ವಾಚ್ ಬೆಲೆ ಕೇಳಿದ್ರೆ ದಂಗಾಗ್ತೀರಿ! ವಾಚ್ ಬೆಲೆ ಇಷ್ಟೊಂದಾ..!!
- ದ್ವಿತೀಯ ಪಿಯುಸಿ ಮರು ಎಣಿಕೆ & ಮೌಲ್ಯಮಾಪನಕ್ಕೆ ಈಗಲೇ ಅರ್ಜಿ ಸಲ್ಲಿಸಿ: ಸಂಪೂರ್ಣ ಮಾಹಿತಿ ಇಲ್ಲಿದೆ
- ಫೋನ್ S*X ಅನುಭವಿಸಿದ್ದರಂತೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವೈರಲ್ ಮಾತುಗಳು
- 2nd PUC Result Announced: ನಿಮ್ಮ ಫಲಿತಾಂಶ ಪರೀಕ್ಷಿಸಿಲು ಲಿಂಕ್ ಇಲ್ಲಿದೆ
- ಈ ಗುಣಗಳಿರುವ ಪುರುಷರ ಮೊದಲ ನೋಟಕ್ಕೇ ಹುಡ್ಗೀರು ಪ್ರೀತಿಯಲ್ಲಿ ಬೀಳ್ತಾರೆ! ಆ ಗುಣಗಳು ನಿಮ್ಮಲ್ಲೂ ಇವೆಯಾ?
- ಮಗುವೊಂದನ್ನು ಅಕ್ರಮವಾಗಿ ದತ್ತು ತೆಗೆದುಕೊಂಡ ಹಗರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ
- ಚಾಣಕ್ಯ ನೀತಿ: ಈ ಐದು ಕೆಟ್ಟ ಅಭ್ಯಾಸಗಳಿಂದ ದೂರವಿದ್ರೆ ನೀವು ಸಮಾಜದಲ್ಲಿ ಗೌರವ ಸಂಪಾದಿಸಬಹುದು
- 2024 ರ ಟಾಪ್-4 ಹೈ-ಮೈಲೇಜ್ ನೀಡುವ ಬೈಕ್ಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ